ಲಭ್ಯತೆ

 

ವಾಯುಮಾರ್ಗ : ಬೆಳಗಾವಿ ಯಿಂದ ಬೆಂಗಳೂರು ಹಾಗೂ ಮುಂಬೈ ಗಳಿಗೆ ವಾಯುಮಾರ್ಗದ ಮೂಲಕ ಸಂಪರ್ಕ ಲಭ್ಯವಿದ್ದು ಬೆಳಗಾವಿ (ಸಾಂಬ್ರಾ)ವಿಮಾನ ನಿಲ್ದಾಣವು ಬೆಳಗಾವಿ ಯಿಂದ ಸುಮಾರು 7 ಕಿ.ಮಿ ಅಂತರದಲ್ಲಿದೆ . ಸದ್ಯ ಸ್ಪೈಸ್ ಜೆಟ್ ಕಂಪನಿಯು ಬೆಳಗಾವಿಯಿಂದ ಬೆಂಗಳೂರು ಹಾಗೂ ಮುಂಬೈಗಳಿಗೆ ವೈಮಾನಿಕ ಸಂಪರ್ಕ ಒದಗಿಸುತ್ತುದ್ದು ಅದರ ವೇಳಾಪಟ್ಟಿಯು ಈ ಕೆಳಗಿನಂತಿದೆ :-

ಬೆಳಗಾವಿ ಯಿಂದ ಮುಂಬೈ ಮತ್ತು ಬೆಂಗಳೂರು ಗೆ ವಿಮಾನ ನಿರ್ಗಮನದ ವೇಳಾಪಟ್ಟಿ
ಫ್ಲೈಟ್ ಸೇವೆ ಒದಗಿಸುತ್ತಿರುವ ಸಂಸ್ಥೆ ಹೆಸರು ಎಲ್ಲಿಂದ ಎಲ್ಲಿಗೆ ನಿರ್ಗಮನ ಸಮಯ
SG 3455 SpiceJet (IXG)ಬೆಳಗಾವಿ ವಿಮಾನ ನಿಲ್ದಾಣ (BOM) ಮುಂಬೈ 11:45 AM
SG 3312 SpiceJet (IXG) ಬೆಳಗಾವಿ ವಿಮಾನ ನಿಲ್ದಾಣ (BLR) ಬೆಂಗಳೂರು
3:20 PM
SG 3310 SpiceJet (IXG)ಬೆಳಗಾವಿ ವಿಮಾನ ನಿಲ್ದಾಣ (BLR) ಬೆಂಗಳೂರು
7:40 PM

 

ಬೆಂಗಳೂರು ಮತ್ತು ಮುಂಬೈ ನಿಂದ ಬೆಳಗಾವಿ ಗೆ ವಿಮಾನ ಆಗಮನದ ವೇಳಾಪಟ್ಟಿ
ಫ್ಲೈಟ್ ಸೇವೆ ಒದಗಿಸುತ್ತಿರುವ ಸಂಸ್ಥೆ ಹೆಸರು ಎಲ್ಲಿಂದ ಎಲ್ಲಿಗೆ ಆಗಮನದ ಸಮಯ
SG 3311 SpiceJet (BLR) ಬೆಂಗಳೂರು
(IXG) ಬೆಳಗಾವಿ ವಿಮಾನ ನಿಲ್ದಾಣ 11:25 AM
SG 3456 SpiceJet (BOM) ಮುಂಬೈ (IXG)ಬೆಳಗಾವಿ ವಿಮಾನ ನಿಲ್ದಾಣ 3:00 PM
SG 3309 SpiceJet (BLR) ಬೆಂಗಳೂರು
(IXG) ಬೆಳಗಾವಿ ವಿಮಾನ ನಿಲ್ದಾಣ 7:20 PM

ಸೂಚನೆ :- ಮೇಲ್ಕಾಣಿಸಿದ ಸಮಯ (14-10-2015 ರಂದು ಇದ್ದಂತೆ) ತೋರಿಸಲಾಗಿದ್ದು, ನಿಖರವಾದ ಆಗಮನ/ನಿರ್ಗಮನದ ಸಮಯಕ್ಕಾಗಿ ಸಂಬಂಧಿಸಿದವರನ್ನು ಸಂಪರ್ಕಿಸತಕ್ಕದ್ದು.

 

 

ರೇಲ್ವೇ ಮಾರ್ಗ :  ಬೆಳಗಾವಿಗೆ ರೇಲ್ವೇ ಸಂಪರ್ಕ ತುಂಬಾ ಚೆನ್ನಾಗಿದೆ. ದಕ್ಷಿಣ ಭಾರತದಲ್ಲಿನ ದೊಡ್ಡ ದೊಡ್ಡ ನಗರಗಳಿಗೆ ಹೋಗುವ ರೇಲ್ವೆಗಳು ಬೆಳಗಾವಿಯ ಮೂಲಕ ಹೋಗುತ್ತದೆ. ಅಲ್ಲದೇ ಬೆಂಗಳೂರು, ಜೈಪುರ, ಪುಣೆ, ಮುಂಬಯಿ, ಜೋಧಪುರ, ಬೆಳಗಾವಿ, ಅಜಮೇರ್, ಹೈದರಾಬಾದ, ಏರ್ನಾಕುಲಮ್, ದೆಹಲಿ, ಚಂಡೀಗಢ ನಗರಗಳಿಗೆ ಹೋಗಲು ಬೆಳಗಾವಿಯಿಂದ ರೇಲ್ವೆ ಸೌಲಭ್ಯ ಇಲ್ಲಿದೆ. ಬೆಳಗಾವಿಯಿಂದ ಬೆಂಗಳೂರಿಗೆ ಹೋಗಲು 12 ಗಂಟೆ ಆದರೆ, ಅದೇ ರೀತಿ ಮುಂಬಯಿಗೆ ಹೋಗಲು ಕೂಡ 12 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೇ ಪ್ರತಿದಿನ ದೆಹಲಿಗೆ ಹೋಗುವ ನಿಜಾಮುದ್ದೀನ ಎಕ್ಸ್‍ಪ್ರೆಸ್ ಕೂಡ್ ಬೆಳಗಾವಿ ಮೇಲಿಂದ ಹೋಗುತ್ತದೆ. ಇದು ದೆಹಲಿ ತಲುಪಲು 35 ಗಂಟೆ ತೆಗೆದುಕೊಳ್ಳುತ್ತದೆ.

 

ರಸ್ತೆ ಮಾರ್ಗಗಳು: ಬೆಳಗಾವಿ ಇದು ದಕ್ಷಿಣ ಹಾಗೂ ಪಶ್ವಿಮ ಭಾರತಕ್ಕೆ ಹೋಗಲು ಎಲ್ಲ ದಾರಿಗಳಿಗೂ ಸಂಪರ್ಕ ಸೇತುವೆಯಾಗಿದೆ. ಇಲ್ಲಿನ ಬಸ್ ಸ್ಟ್ಯಾಂಡ್ ಹಳೆ ಬೆಳಗಾವಿ ನಗರಕ್ಕೆ ಹತ್ತಿರವಾಗಿದೆ. ಬೆಳಗಾವಿ ಇದು ಬೆಂಗಳೂರು ಹಾಗೂ ಮುಂಬಯಿ ನಗರಗಳಿಗೆ ಮಧ್ಯಂತರವಾಗಿದೆ. ಅಲ್ಲದೆ. ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕೂಡ ಬೆಳಗಾವಿಯಲ್ಲಿದೆ.


Best Viewed in latest version of firefox,chrome, Internet Explorer 9 or above with resolution 1024x768.