ಜಿಲ್ಲಾಧಿಕಾರಿಗಳ ಕಾರ್ಯಾಲಯ - ಬೆಳಗಾವಿ

 

 

line decor
  
ಸಹಾಯ ವಾಣಿ :0831-2565555 8.00AM TO 8.00 PM-18 ವಿಧಾನಸಭಾ ಕ್ಷೇತ್ರಗಳು-4408 ಮತದಾನ ಕೇಂದ್ರಗಳು
line decor
 

       
 
   
 

 
 

ಬೆಳಗಾವಿ ಜಿಲ್ಲೆಯ ಪರಿಚಯ

..........................

............ಬೆಳಗಾವಿ ಜಿಲ್ಲೆಯು ಕರ್ನಾಟಕ ರಾಜ್ಯದಲ್ಲಿಯೇ ಅತಿ ದೊಡ್ಡ ಜಿಲ್ಲೆಯಾಗಿದ್ದು, ಬೆಳಗಾವಿ ನಗರವು ಜಿಲ್ಲಾ ಕೇಂದ್ರವಾಗಿದೆ. ಬೆಳಗಾವಿಯಲ್ಲಿ ರಾಜ್ಯದ ಎರಡನೆಯ ಶಾಸನ ಸಭೆಯಾದ ಸುವರ್ಣಸೌದವಿದ್ದು ಇಲ್ಲಿ ಪ್ರತಿ ವರ್ಷ ಒಂದು ಬಾರಿ ಅಧಿವೇಶನ ಜರುಗುತ್ತದೆ. ಸನ್-2011ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ 4,778,439 ಜನಸಂಖ್ಯೆಯಿದ್ದು, ಇದರಲ್ಲಿ 24.03% ಜನ ಸಂಖ್ಯೆಯು ನಗರ ಪ್ರದೇಶದ ನಿವಾಸಿಯಾಗಿರುವದರಿಂದ ರಾಜ್ಯದಲ್ಲಿ ಅತಿ ಹೆಚ್ಚು ಜನ ಸಾಂದ್ರತೆಯನ್ನು ಹೊಂದಿದ ಜಿಲ್ಲೆಯಾಗಿದೆ.  ಬೆಳಗಾವಿ ಜಿಲ್ಲೆಯ 13,415 ಚ.ಕಿ.ಮೀ ವಿಸ್ತಿರ್ಣವನ್ನು ಹೊಂದಿದ್ದು, ಪಶ್ಚಿಮ ಹಾಗೂ ಉತ್ತರದಲ್ಲಿ ಮಹಾರಾಷ್ಟ್ರ ರಾಜ್ಯ, ಉತ್ತರಪೂರ್ವದಲ್ಲಿ ವಿಜಯಪೂರ ಜಿಲ್ಲೆ, ಪೂರ್ವದಲ್ಲಿ ಬಾಗಲಕೋಟೆ ಜಿಲ್ಲೆ, ದಕ್ಷಿಣ ಪೂರ್ವದಲ್ಲಿ ಗದಗ ಜಿಲ್ಲೆ, ದಕ್ಷಿಣದಲ್ಲಿ ಧಾರವಾಡ, ಹಾಗೂ ಉತ್ತರಕನ್ನಡ ಜಿಲ್ಲೆ ಮತ್ತು ದಕ್ಷಿಣ ಪಶ್ಚಿಮದಲ್ಲಿ ಗೋವಾ ರಾಜ್ಯದೊಂದಿಗೆ ಗ ಡಿಯನ್ನು ಹೊಂದಿದೆ.
   

..........ಬೆಳಗಾವಿ ಜಿಲ್ಲೆಯು 14 ತಾಲೂಕುಗಳನ್ನು ಹೊಂದಿದ್ದು, ಅದರಲ್ಲಿ ಅಥಣಿ 1997.70 ಚ.ಕಿ.ಮೀ ವಿಸ್ತಿರ್ಣ ಹೊಂದಿದ ಅತಿ ದೊಡ್ಡ ತಾಲ್ಲೂಕು ಹಾಗೂ 958.8 ಚ.ಕಿ.ಮೀ ವಿಸ್ತಿರ್ಣ ಹೊಂದಿದ ರಾಯಬಾಗ ಅತಿ ಚಿಕ್ಕ ತಾಲ್ಲೂಕುವಾಗಿದೆ. ಜಿಲ್ಲೆಯು 03 ಕಂದಾಯ ವಿಭಾಗ ಹಾಗೂ 06 ಆರಕ್ಷಕ ವಿಭಾಗಗಳನ್ನು ಒಳಗೊಂಡಿದ್ದು, ಬೆಳಗಾವಿ ಮಹಾನಗರ ಪಾಲಿಕೆಯನ್ನು ಹೊರತುಪಡಿಸಿ 17 ಪುರಸಭೆ, 20 ಪಟ್ಟಣ ಪಂಚಾಯತಿಗಳ ಹಾಗೂ 506 ಗ್ರಾಮ ಪಂಚಾಯತಿಗಳನ್ನು ಹೊಂದಿದೆ, ಈ ಪೈಕಿ 1138 ಕಂದಾಯ ಗ್ರಾಮಗಳು ಹಾಗೂ 26 ಕಂದಾಯರಹಿತ ವಸತಿ ಪ್ರದೇಶವನ್ನು ಒಳಗೊಂಡಿದೆ, ಬೆಳಗಾವಿಯು ಬೆಳಗಾವಿ ಕಂದಾಯ ವಿಭಾಗದ ಕೇಂದ್ರಸ್ಥಾನವಾಗಿದೆ.

 
  ...............    
© 2018. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ವಿಷಯ ಸ್ವಾಮ್ಯ ಮತ್ತು ನಿರ್ವಹಣೆ – ಜಿಲ್ಲಾಧಿಕಾರಿಗಳ ಕಾರ್ಯಾಲಯ - ಬೆಳಗಾವಿ
EVM

............ಇ.ವಿ.ಎಮ್ ಡೆಮೊ

 

............ವಿವಿಪ್ಯಾಟ್ ಡೆಮೊ

 

     
fa