ಕೆ.ಎಲ್.ಇ. ವಿಶ್ವನಾಥ ಕತ್ತಿ ದಂತ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ

 

ಕೆ.ಎಲ್.ಇ. ಸಂಸ್ಥೆಯು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ವೃತ್ತಿ ಪರತೆ ಸಮೀಕರಿಸುವ ಹಾಗೂ ಉರ್ಜಿತಗೊಳಿಸಲು ಜ್ಞಾನ ಮತ್ತು ಕಲ್ಪನೆಯುಕ್ತ ಮಾದರಿಯ ಪರಿಕಲ್ಪನೆಯನ್ನು ನೀಡುವ ನಿಟ್ಟಿನಲ್ಲಿ ದಂತ ವಿಜ್ಞಾನ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯನ್ನು ಸಾಕಾರಗೊಳಿಸಿದೆ. ಸದರಿ ಸಂಸ್ಥೆಯು ದೇಶದಲ್ಲಿ ಮುಂಚೂಣಿಯಲ್ಲಿದ್ದು ಹಾಗೂ ಎಶಿಯಾ ಖಂಡದಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ದಂತ ಮಹಾವಿದ್ಯಾಲಯವು 1985 ರಲ್ಲಿ ಪ್ರಾರಂಭಗೊಂಡಿದ್ದು ದೇಶದ ಮೂಲೆ-ಮೂಲೆಗಳಿಂದ ವಿದ್ಯಾರ್ಥಿಗಳು ಇಲ್ಲಿ ಬಂದು ವಿದ್ಯಾರ್ಜನೆ ಕೈಗೊಳ್ಳುತ್ತಿದ್ದಾರೆ ಮಹಾವಿದ್ಯಾಲಯವು ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದಿಂದ ಮಾನ್ಯತೆಯನ್ನು ಪಡೆದಿದೆ. ಹಾಗೂ ರಾಜೀವ ಗಾಂಧಿ ಆರೋಗ್ಯ ಸಂಸ್ಥೆ ಬೆಂಗಳೂರುದಿಂದಲೂ ಮಾನ್ಯತೆಯನ್ನು ಪಡೆಯುವದರೊಂದಿಗೆ ಭಾರತೀಯ ದಂತ ಮಂಡಳಿಯಿಂದಲೂ 1989 ರಲ್ಲಿ ದಂತ ಪದವಿ ಪ್ರದಾನಿಸಲು ಮಾನ್ಯತೆಯನ್ನು ಹೊಂದಿದೆ. ಸಂಸ್ಥೆಯು ಅನೇಕ ಉತ್ತಮ ಸೌಲಭ್ಯಗಳಾದ ವಸತಿ ನಿಲಯ, ಸುಂದರ ಕ್ಯಾಂಪಸ, ಕ್ಯಾಂಟೀನ್, ಅಡಿಟೋರಿಯಂ ಹಾಗೂ ವಿವಿಧ ದಂತ ವಿಭಾಗಗಳನ್ನು ಹೊಂದಿದೆ ಸುಮಾರು 1000 ವಿದ್ಯಾರ್ಥಿಗಳು ದಂತ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದಿರುತ್ತಾರೆ.

ದಂತ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು ದಂತ ಚಿಕಿತ್ಸೆ, ದಂತ ಯಂತ್ರ ಶಾಸ್ತ್ರ ಮತ್ತು ದಂತ ಆರೋಗ್ಯ ಶಾಸ್ತ್ರ ಇತ್ಯಾದಿ ಚಿಕಿತ್ಸೆಗಳನ್ನು ಒದಗಿಸುತ್ತಿದ್ದು ಸಂಸ್ಥೆಯು 2003 ಅಕ್ಟೋಬರನಿಂದ ವಿಶಿಷ್ಟ ಚಿಕಿತ್ಸೆಗಳಾದ ಪ್ರಾಸ್ಟೊಡೊಂಟಿಕ್ಸ ಪೆರಿಯೋಡೊಂಟಿಕ್ಸ ಬಾಯಿ ಹಾಗೂ ಮುಖ ಚಿಕಿತ್ಸೆ, ಸಾಂಪ್ರದಾಯಕ ದಂತ ಚಿಕಿತ್ಸೆ, ಓರಲ್ ಪೆಥೊಲಾಜಿ, ಸಮುದಾಯ ದಂತ ಚಿಕಿತ್ಸೆ, ಬಾಯಿ ವಿಕಿರಣ ಶಾಸ್ತ್ರಗಳನ್ನು ಅಳವಡಿಸಿಕೊಂಡಿದೆ.

ಸಂಸ್ಥೆಯು ಹಲವಾರು ದಂತ ಚಿಕಿತ್ಸಾ ಶಿಬಿರಗಳನ್ನು ಅಯೋಜಿಸಿದ್ದು ಅಕ್ಟೋಬರ 18 ರಂದು ಅಲುಮ್ನಿ ಸಮಾರಂಭವನ್ನು ಆಯೋಜಿಸಿದೆ ದಂತ ವೈದ್ಯಕೀಯ ಸಂಸ್ಥೆಯು ಬಾಯಿ ಚಿಕಿತ್ಸಾ ಔಷಧಿ ವಿಭಾಗ, ವಿಕಿರಣ ಶಾಸ್ತ್ರ ವಿಭಾಗ, ಬಾಯಿ ಮತ್ತು ಮುಖ ಶಾಸ್ತ್ರ ಚಕಿತ್ಸಾ ವಿಭಾಗ, ಸಾಂಪ್ರದಾಯಿಕ ದಂತ ಶಾಸ್ತ್ರ ವಿಭಾಗ, ಪ್ರಾಸ್ಟೊಡೊಂಟಿಕ್ಸ, ವಿಕಿರಣ ಶಾಸ್ತ್ರ ವಿಭಾಗ, ಸೂಕ್ಷ್ಮ ಜೀವಿ ಶಾಸ್ತ್ರ ವಿಭಾಗ, ಮತ್ತು ಸಮುದಾಯಕ ಸೂಕ್ಷ್ಮಜೀವಿ ಶಾಸ್ತ್ರದ ವಿಭಾಗಳನ್ನು ಹೊಂದಿದೆ.

ಹೆಚ್ಚಿನ ಮಾಹಿತಿ ಕುರಿತು ಸಂಪರ್ಕಿಸಬೇಕಾದ ವಿಳಾಸ:
ಪ್ರಾಂಶುಪಾಲರು ಕೆ.ಎಲ್.ಇ. ಸಂಸ್ಥೆಯ ದಂತ ಆಸ್ಪತ್ರೆ ಮತ್ತು ಸಂಶೋಧನಾ ಕೇಂಧ್ರ ಬೆಳಗಾವಿ 590010 ಕರ್ನಾಟಕ (ಭಾರತ)

ದೊ ಸಂ:091-831-2470333, 2470362
ಫ್ಯಾಕ್ಸ :091-831-2470640
ವಿ-ಅಂಚೆ: principal[at]kids_bgm[dot]org
ವೆಬ್ ಸೈಟ: http://www[dot]kids_bgm[dot]org

Best Viewed in latest version of firefox,chrome, Internet Explorer 9 or above with resolution 1024x768.