Close

ಆಸಕ್ತಿಯ ಸ್ಥಳಗಳು

ಗೋಕಾಕ ಜಲಪಾತ (ಬೆಳಗಾವಿ)

ಗೋಕಾಕ ಜಲಪಾತ - ಬೆಳಗಾವಿ

ಗೋಕಾಕ ಜಲಪಾತ ಇದು ಬೆಳಗಾವಿಯಿಂದ 60 ಕೀಮೀ. ದೂರದಲ್ಲಿದ್ದು, ಗೋಕಾಕ ನಗರದಿಂದ 10 ಕೀ.ಮೀ. ಅಂತರದಲ್ಲಿದೆ. ಇದು ಮುಖ್ಯ ರಸ್ತೆಯಲ್ಲಿಯೇ ಇದ್ದು, ಇದರ ಸೊಬಗು ನೋಡುಗರಿಗೆ ಜಿಲ್ಲೆಯ ಒಂದು ಪ್ರವಾಸಿ ಕೇಂದ್ರವಾಗಿ ಆಕರ್ಷಿತಗೊಂಡಿದೆ. ಈ ಜಲಪಾತ 170 ಅಡಿ ಎತ್ತರದಿಂದ ಧುಮುಕುತ್ತದೆ. ಘಟಪ್ರಭಾ ನದಿಯಿಂದ ಅಂಕುಡೊಂಕಾದ ದಾರಿಯಲ್ಲಿ 52 ಕೀ.ಮೀ. ನಷ್ಟು ಹರಿದರೆ, 170 ಅಡಿ ಕೆಳಗೆ ನೀರು ಧುಮುಕುತ್ತದೆ. ಈ ಜಲಪಾತ ತನ್ನ ಆಕಾರ ಹಾಗೂ ಹರಿಯುವ ನೀರಗೆ ತುಂಬಾ ಪ್ರಸಿದ್ಧಿ ಹೊಂದಿದೆ. ಇಲ್ಲಿನ ಸೊಬಗು ಕವಿತೆ ಬರೆಯಲಿಕ್ಕೆ ಪ್ರೇರಣೆ ನೀಡುವಂತಿದೆ. ಜೂನ್ – ಸೆಪ್ಟೆಂಬರ ನಲ್ಲಿ ಗೋಕಾಕ್ ಜಲಪಾತ ಧುಮುಕುವುದರಿಂದ ಈ ಅವಧಿಯಲ್ಲಿಯೇ ನೋಡಬಹುದಾಗಿದೆ. 1887 ರಲ್ಲಿ ದೇಶದಲ್ಲಿಯೇ ಪ್ರಪ್ರಥಮವಾಗಿ ಈ ಜಲಪಾತಲದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಯಿತು.

ಯಲ್ಲಮ್ಮ ದೇವಸ್ಥಾನ (ಸವದತ್ತಿ):

ಯಲ್ಲಮ್ಮ ದೇವಸ್ಥಾನ - ಸವದತ್ತಿ

ಸವದತ್ತಿ ಇದು ಧಾರ್ಮಿಕ ಕ್ಷೇತ್ರಕ್ಕೆ ಪ್ರಸಿದ್ದವಾಗಿದ್ದು, ಅದರಲ್ಲೂ ಯಲ್ಲಮ್ಮನ ದೇವಸ್ಥಾನಕ್ಕೆ ಇದು ತುಂಬಾ ಪ್ರಸಿದ್ಧಿಯಾಗಿದೆ. ಇದು ಬೆಳಗಾವಿಯಿಂದ 70 ಕೀ.ಮೀ. ದೂರದಲ್ಲಿದೆ. ಸವದತ್ತಿ ನಗರದಿಂದ ಈ ದೇವಸ್ಥಾನ 5 ಕೀ.ಮೀ. ಅಂತರದಲ್ಲಿದೆ. ಈ ದೇವಸ್ಥಾನಕ್ಕೆ ಹತ್ತಿರವಾಗಿ ದೊಡ್ಡದಾದ ಪರ್ವತವನ್ನು ಕಾಣಬಹುದಾಗಿದೆ. ಈ ಹಿಂದೆ ಈ ಪರ್ವತ ಸಿದ್ದಾಂಚಲ ಪರ್ವತ ಎಂದು ಪ್ರಸಿದ್ಧಿ ಹೊಂದಿತ್ತು. ಈ ದೇವಸ್ಥಾನವನ್ನು ಚಾಲುಕ್ಯರು ಹಾಗೂ ರಾಷ್ಟಕೂಟರ ಪದ್ದತಿಯಲ್ಲಿ ಕಟ್ಟಲಾಗಿದೆ. ಈ ದೇವಸ್ಥಾನವನ್ನು ಬೋಪಣ್ಣ ನಾಯಕ ಇವರಿಂದ 1514 ರಲ್ಲಿ ಕಟ್ಟಲ್ಪಟ್ಟಿದೆ. ಇಲ್ಲಿ ಗಣೇಶ, ಮಲ್ಲಿಕಾರ್ಜುನ, ಪರಶುರಾಮ , ಏಕನಾಥ, ಸಿದ್ದೇಶ್ವರ ಇತರೆ ದೇವಸ್ಥಾನಗಳನ್ನು ಇಲ್ಲಿ ಕಾಣಬಹುದಾಗಿದೆ. ದೇವಿಯ ಜಾತ್ರೆಯ ಸಮಯದಲ್ಲಿ ಕರ್ನಾಟಕ ಹೊರತಾಗಿ ಮಹಾರಾಷ್ಟ್ರ , ಗೋವಾ, ಆಂಧ್ರಪ್ರದೇಶದಿಂದ ಬರುವ ಭಕ್ತರನ್ನು ಇಲ್ಲಿ ಕಾಣಬಹುದಾಗಿದೆ. 1975 ರಿಂದ ಇದು ಕರ್ನಾಟಕ ಸರ್ಕಾರದ ಸ್ವಾಧೀನದಲ್ಲಿ ಒಳಪಡುತ್ತಿದ್ದು, ಸರ್ಕಾರವು ಇಲ್ಲಿ ಭಕ್ತಾದಿಗಳ ಸಂಬಂಧ ಧರ್ಮಶಾಲೆ, ಆರೋಗ್ಯ ಕೇಂದ್ರ ಹಾಗೂ ಇನ್ನಿತರೆ ಸೌಕರ್ಯಗಳನ್ನು ಇಲ್ಲಿ ಒದಗಿಸಿದೆ. .

ಗೊಡಚಿನಮಲ್ಕಿ ಜಲಪಾತ (ಗೋಕಾಕ) :

ಗೊಡಚಿನಮಲ್ಕಿ ಜಲಪಾತ -ಗೋಕಾಕಈ ಜಲಪಾತ ಗೋಕಾಕನಿಂದ 16 ಕೀಮಿ. ಅಂತರದಲ್ಲಿದೆ. ಗೋಕಾಕ್ – ಕೊಣ್ಣುರ ಮಾರ್ಗದ ಮಧ್ಯದಲ್ಲಿ ಹಚ್ಚು ಹಸಿರು ಪರ್ವತದ ಮಧ್ಯದಲ್ಲಿ ಈ ಜಲಪಾತ ಇದೆ. ಮಾರ್ಕಂಡೆಯ ನದಿ ಈ ಜಲಪಾತದಲ್ಲಿ 25 ಮೀ.ಟರ್ ನಷ್ಟು ಹರಿಯುತ್ತಿದ್ದು, 18 ಮೀಟರ್ ಎತ್ತರದಲ್ಲಿ ಧುಮುಕುತ್ತದೆ.

ಬೆಳಗಾವಿ ಕೋಟೆ (ಬೆಳಗಾವಿ) :

ಬೆಳಗಾವಿ ಕೋಟೆ - ಬೆಳಗಾವಿಈ ಕೋಟೆಯನ್ನು ಸ್ಥಳೀಯ ಆಳ್ವಿಕೆದಾರರಿಂದ 12 ನೇ ದಶಕದಲ್ಲಿ ಕಟ್ಟಲಾಗಿದ್ದು, ಹಂತ ಹಂತವಾಗಿ ಇದನ್ನು ಬೆಳಗಾವಿಯನ್ನು ಆಳುವ ಆಳ್ವಿಕೆದಾರರು ಅಭಿವೃದ್ಧಿ ಪಡಿಸಿದರು. ಈ ಕೋಟೆಯು ಮಸೀದಿ ಹಾಗೂ ಮಂದಿರ ಎರಡೂ ರೀತಿಯಲ್ಲಿ ಕಟ್ಟಿರುವಂತಹ ಕೋಟೆಯಾಗಿದೆ. ಈ ಕೋಟೆಯ ಮುಖ್ಯ ದ್ವಾರದಲ್ಲಿ ಗಣೇಶ ದೇವಸ್ಥಾನ ಹಾಗೂ ದುರ್ಗಾ ದೇವಸ್ಥಾನ ಇದ್ದು, ಸಫಾ ಮಸೀದಿ ಕೂಡ ಈ ಎರಡೂ ಮಸೀದಿಗಳಲ್ಲಿರುವ ಒಂದೂ ಮಸೀದಿಯಾಗಿತ್ತು. ಈ ಮಸೀದಿ ಬೆಳಗಾವಿಯಲ್ಲಿರುವ 25-30 ಮಸೀದಿಗಳಲ್ಲಿಯೇ ಸುಂದರವಾದ ಮಸೀದಿ ಈದಾಗಿದೆ. ಇಂಡೋ-ಸಾರ್ಸೆನಿಕ್ ಹಾಗೂ ಡೆಕ್ಕನ್ ಶೈಲಿಯಲ್ಲಿನ ಆರ್ಚ್ ಪಾಯಿಂಟ್, ಮಿನಾರ್ಸ್ ಗಳನ್ನು ಇಲ್ಲಿ ಕಾಣಬಹುದಾಗಿದೆ. .

ಕಮಲಬಸ್ತಿ: – ಬೆಳಗಾವಿ

ಕಮಲಬಸ್ತಿ: - ಬೆಳಗಾವಿ

ಕೋಟೆಯಲ್ಲಿರುವ ಎರಡು ಬಸ್ತಿಗಳಲ್ಲಿ ಕಮಲಬಸ್ತಿ ಕೂಡ ಒಂದಾಗಿದೆ. ಇದನ್ನು 1204 ರಲ್ಲಿ ನಿರ್ಮಿಸಲಾಗಿದೆ. ಈ ಬಸ್ತಿಯನ್ನು ಚಾಲುಕ್ಯರ ಶೈಲಿಯಲ್ಲಿ ನೇಮಿನಾಥರ ಮೂರ್ತಿಯನ್ನು ಕಪ್ಪು ಕಲ್ಲಿನಲ್ಲಿ ಕೆತ್ತಲಾಗಿದೆ. ಇಲ್ಲಿನ ಮುಖ್ಯ ಆಕರ್ಷಣೆ “ಮುಖಮಂಟಪ” ವನ್ನು ಎತ್ತರದಲ್ಲಿ ಕಮಲ ಹೂವಿನ ಆಕಾರದಲ್ಲಿ ಕೆತ್ತಲಾಗಿದೆ. ಕಮಲ ಬಸ್ತಿಯ ಹೊರಗಡೆ ಇನ್ನೊಂದು ಜೈನ ದೇವಾಲಯವೂ ಇದೆ.

ನವಿಲುತೀರ್ಥ ಸವದತ್ತಿ

ನವಿಲುತೀರ್ಥ ಸವದತ್ತಿ

ಸವದತ್ತಿಯಿಂದ 10 ಕೀ.ಮೀ. ಅಂತರದಲ್ಲಿದಲ್ಲಿದೆ. 2 ಕಣಿವೆಗಳ ಮಧ್ಯೆ ಹರಿಯುವ ಚಿಕ್ಕದಾದ ಜಲಪಾತ ಇಲ್ಲಿದೆ. ಮುಂಚೆ ಇಲ್ಲಿ ನವಿಲುಗಳು ತುಂಬಾ ಇದ್ದು, ನೀರಿನ ಕೊಳದ ಅಕ್ಕ ಪಕ್ಕವೆಲ್ಲ ನವಿಲುಗಳೇ ಕಾಣಿಸಲ್ಪಡುತ್ತಿದ್ದವು. ಆದ್ದರಿಂದ ಇದನ್ನು ನವಿಲುತೀರ್ಥ ಎಂದು ಹೆಸರಿಡಲಾಯಿತು. ಮಲಪ್ರಭಾ ಡ್ಯಾಮ್‍ಗೆ ಹತ್ತಿರವಾಗಿ ರೇಣುಕಾ ಸಾಗರ ಕೂಡ ಇಲ್ಲಿದೆ. ಇದು ಒಂದು ಪ್ರವಾಸಿ ತಾಣವಾಗಿ ಪ್ರಸಿದ್ಧಿಯಾಗಿದೆ..

ರಾಕ್ಕಸ್‍ಕೊಪ್ಪ (ಬೆಳಗಾವಿ) :

ರಾಕ್ಕಸ್‍ಕೊಪ್ಪ - ಬೆಳಗಾವಿಇದು ಬೆಳಗಾವಿಯಿಂದ 16 ಕೀ.ಮೀ. ಅಂತರದಲ್ಲಿದೆ. ರಕ್ಕಸರು ಇಲ್ಲಿನ ಹಳ್ಳಿಗಳ ಸುತ್ತಮುತ್ತರ ವಾಸಿಸುತ್ತಿರುವುದರಿಮದ ಇದಕ್ಕೆ ರಕ್ಕಸಕೊಪ್ಪ ಎಂದು ಹೆಸರು ಬಂದಂತಾಗಿದೆ. ಇಲ್ಲಿ ಮಾರ್ಕಂಡೇಯ ನದಿಯಿಂದ ನೀರು ಹರಿಬರುತ್ತಿರುವುದರಿಂದ ಇಲ್ಲಿ ಡ್ಯಾಮ್ ನಿರ್ಮಿಸಲಾಗಿದ್ದು, ಈ ನೀರನ್ನೇ ಬೆಳಗಾವಿ ನಗರಕ್ಕೆಲ್ಲ ಕುಡಿಯುವ ನೀರಿಗಾಗಿ ಹರಿಬಿಡಲಾಗುತ್ತಿದೆ. .

ಕಪಿಲೇಶ್ವರ ಮಂದಿರ (ಬೆಳಗಾವಿ)

ಕಪಿಲೇಶ್ವರ ಮಂದಿರ - ಬೆಳಗಾವಿಇದು ಬೆಳಗಾವಿಯಲ್ಲಿನ ಹಳೆಯ ದೇವಾಸ್ಥಾನಗಳಲ್ಲಿ ಇದು ಒಂದು. ಈ ದೇವಸ್ಥಾನವು ದಕ್ಷಿಣದ ಕಾಶಿ ಎಂದು ಹೆಸರುವಾಸಿಯಾಗಿದೆ. 12 ಜ್ಯೋತಿರ್ಲಿಂಗದ ದರ್ಶನದ ನಂತರ ಕಪಿಲೇಶ್ವರ ದೇವರ ದರ್ಶನ ಮಾಡದಿದ್ದರೆ ಯಾತ್ರೆ ಅಪೂರ್ಣವೆಂದು ಜನರ ನಂಬಿಕೆಯಾಗಿದೆ. ಶ್ರಾವಣ ಮಾಸದಲ್ಲಿ ಕಪಿಲೇಶ್ವರ ಮಂದಿರಕ್ಕೆ ಭೇಟಿ ಮಾಡಲೇಬೇಕಾಗಿದ್ದು, ಮಹಾಶಿವರಾತ್ರಿಯ ಸಮಯದಲ್ಲಿ ಇಲ್ಲಿ ಜನ ಬರುತ್ತಾರೆ. ಈ ಜೋತಿರ್ಲಿಂಗವು ಸ್ವಯಂ ಆಧಾರಿತವಾಗಿದೆ. ಇಲ್ಲಿನ ಗಣೇಶ, ಹನುಮಂತ, ದತ್ತ ಹಾಗೂ ಸಾಯಿಬಾಬ ದೇವಸ್ಥಾನಗಳು ಈ ದೇವಾಸ್ಥಾನದ ಸುತ್ತಲೂ ಇದೆ. ನವಗ್ರಹ ಮಂದಿರ ಕೂಡ ಈ ದೇವಸ್ಥಾನದಲ್ಲಿದೆ..