Close

ಆಡಳಿತಾತ್ಮಕ ವ್ಯವಸ್ಥೆ

ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ಮುಖ್ಯಸ್ಥರಾಗಿ ರಾಜ್ಯ ಸರಕಾರದ ನಿರ್ದೇಶನದಡಿ ಕಾರ್ಯ ನಿರ್ವಹಿಸುತ್ತಾರೆ. ಜಿಲ್ಲಾಧಿಕಾರಿಗಳ ಕಾರ್ಯಾಲಯವು ವಿವಿಧ ಶಾಖೆಗಳನ್ನು ಹೊಂದಿದ್ದು, ಆಯಾ ಶಾಖೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳು ಶಿರಸ್ತೇದಾರ/ವ್ಯವಸ್ಥಾಪಕ ಶ್ರೇಣಿಯ ಅಧಿಕಾರಿಗಳಿಂದ ನಿರ್ವಹಿಸಲ್ಪಡುತ್ತವೆ. ಇವರು ಆಯಾ ಶಾಖೆಯ ಕಾರ್ಯಗಳ ಮೇಲುಸ್ತುವಾರಿ, ಆಧೀನ ಸಿಬ್ಬಂದಿಗಳಿಗೆ ಕೆಲಸದ ನಿರ್ವಹಣೆಯಲ್ಲಿ ಮಾರ್ಗದರ್ಶನ, ಮುಂತಾದ ಕಾರ್ಯಗಳಿಗೆ ಜವಾಬ್ದಾರರಾಗಿರುತ್ತಾರೆ. ಪ್ರತಿ ಶಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ತಮ್ಮ ಮೇಲಾಧಿಕಾರಿಗಳಿಂದ ಹಂಚಿಕೆಯಾಗಿರುವ ಕಾರ್ಯವನ್ನು ಶಾಖಾ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಾರೆ.