ತಲುಪುವ ಬಗೆ
ವಾಯುಮಾರ್ಗ : ಬೆಳಗಾವಿ ಯಿಂದ ಬೆಂಗಳೂರು ವಾಯುಮಾರ್ಗದ ಮೂಲಕ ಸಂಪರ್ಕ ಲಭ್ಯವಿದ್ದು ಬೆಳಗಾವಿ (ಸಾಂಬ್ರಾ)ವಿಮಾನ ನಿಲ್ದಾಣವು ಬೆಳಗಾವಿ ಯಿಂದ ಸುಮಾರು 7 ಕಿ.ಮಿ ಅಂತರದಲ್ಲಿದೆ . ಸದ್ಯ ಏರ್ ಇಂಡಿಯಾ ಬೆಳಗಾವಿಯಿಂದ ಬೆಂಗಳೂರು ವೈಮಾನಿಕ ಸಂಪರ್ಕ ಒದಗಿಸುತ್ತುದ್ದು ಅದರ ವೇಳಾಪಟ್ಟಿಯು ಈ ಕೆಳಗಿನಂತಿದೆ :-
ಬೆಂಗಳೂರು ನಿಂದ ಬೆಳಗಾವಿ
ಎಲ್ಲಿಂದ | ಎಲ್ಲಿಗೆ |
ವಿಮಾನ ಸಂಖ್ಯೆ
|
ದಿನಗಳು
|
ನಿರ್ಗಮನ | ಆಗಮನ |
ವಿಮಾನ
|
ನಿಲ್ಲುವಿಕೆ
|
---|---|---|---|---|---|---|---|
ಬೆಂಗಳೂರು | ಬೆಳಗಾವಿ | 9I 0513 | ಬುಧ,ಶನಿ | 14:10 | 15:35 | ATR-72 | |
ಬೆಂಗಳೂರು | ಬೆಳಗಾವಿ | 9I 0513 |
ಮಂಗಳ |
15:40 | 17:05 | ATR-72 | |
ಬೆಂಗಳೂರು | ಬೆಳಗಾವಿ | AI 0585 |
ಸೋಮ,ಗುರು,ಶುಕ್ರ,ಭಾನು
|
7:25 | 8:30 | A-319 |
ಬೆಳಗಾವಿ ಯಿಂದ ಬೆಂಗಳೂರು
ಎಲ್ಲಿಂದ | ಎಲ್ಲಿಗೆ |
ವಿಮಾನ ಸಂಖ್ಯೆ
|
ದಿನಗಳು
|
ನಿರ್ಗಮನ | ಆಗಮನ |
ವಿಮಾನ
|
ನಿಲ್ಲುವಿಕೆ
|
---|---|---|---|---|---|---|---|
ಬೆಳಗಾವಿ | ಬೆಂಗಳೂರು | 9I 0514 | ಬುಧ,ಶನಿ | 16:05 | 17:25 | ATR-72 | |
ಬೆಳಗಾವಿ | ಬೆಂಗಳೂರು | 9I 0514 | ಮಂಗಳ | 17:35 | 18:45 | ATR-72 | |
ಬೆಳಗಾವಿ | ಬೆಂಗಳೂರು | AI 0586 | ಸೋಮ,ಗುರು,ಶುಕ್ರ,ಭಾನು | 9:30 | 10:30 | A-319 |
ಮೂಲ: ಏರ್ ಇಂಡಿಯಾ ವೆಬ್ಸೈಟ್
ರೇಲ್ವೇ ಮಾರ್ಗ : ಬೆಳಗಾವಿಗೆ ರೇಲ್ವೇ ಸಂಪರ್ಕ ತುಂಬಾ ಚೆನ್ನಾಗಿದೆ. ದಕ್ಷಿಣ ಭಾರತದಲ್ಲಿನ ದೊಡ್ಡ ದೊಡ್ಡ ನಗರಗಳಿಗೆ ಹೋಗುವ ರೇಲ್ವೆಗಳು ಬೆಳಗಾವಿಯ ಮೂಲಕ ಹೋಗುತ್ತದೆ. ಅಲ್ಲದೇ ಬೆಂಗಳೂರು, ಜೈಪುರ, ಪುಣೆ, ಮುಂಬಯಿ, ಜೋಧಪುರ, ಬೆಳಗಾವಿ, ಅಜಮೇರ್, ಹೈದರಾಬಾದ, ಏರ್ನಾಕುಲಮ್, ದೆಹಲಿ, ಚಂಡೀಗಢ ನಗರಗಳಿಗೆ ಹೋಗಲು ಬೆಳಗಾವಿಯಿಂದ ರೇಲ್ವೆ ಸೌಲಭ್ಯ ಇಲ್ಲಿದೆ. ಬೆಳಗಾವಿಯಿಂದ ಬೆಂಗಳೂರಿಗೆ ಹೋಗಲು 12 ಗಂಟೆ ಆದರೆ, ಅದೇ ರೀತಿ ಮುಂಬಯಿಗೆ ಹೋಗಲು ಕೂಡ 12 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೇ ಪ್ರತಿದಿನ ದೆಹಲಿಗೆ ಹೋಗುವ ನಿಜಾಮುದ್ದೀನ ಎಕ್ಸ್ಪ್ರೆಸ್ ಕೂಡ್ ಬೆಳಗಾವಿ ಮೇಲಿಂದ ಹೋಗುತ್ತದೆ. ಇದು ದೆಹಲಿ ತಲುಪಲು 35 ಗಂಟೆ ತೆಗೆದುಕೊಳ್ಳುತ್ತದೆ.
ರಸ್ತೆ ಮಾರ್ಗಗಳು: ಬೆಳಗಾವಿ ಇದು ದಕ್ಷಿಣ ಹಾಗೂ ಪಶ್ವಿಮ ಭಾರತಕ್ಕೆ ಹೋಗಲು ಎಲ್ಲ ದಾರಿಗಳಿಗೂ ಸಂಪರ್ಕ ಸೇತುವೆಯಾಗಿದೆ. ಇಲ್ಲಿನ ಬಸ್ ಸ್ಟ್ಯಾಂಡ್ ಹಳೆ ಬೆಳಗಾವಿ ನಗರಕ್ಕೆ ಹತ್ತಿರವಾಗಿದೆ. ಬೆಳಗಾವಿ ಇದು ಬೆಂಗಳೂರು ಹಾಗೂ ಮುಂಬಯಿ ನಗರಗಳಿಗೆ ಮಧ್ಯಂತರವಾಗಿದೆ. ಅಲ್ಲದೆ. ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕೂಡ ಬೆಳಗಾವಿಯಲ್ಲಿದೆ.