Close

ಮ್ಯಾನೇಜ್ ಮೆಂಟ್ ಕಾಲೇಜುಗಳು

ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೇಂಟ್ ಎಜುಕೇಶನ & ರಿಸರ್ಚ್ – IMER (ಬೆಳಗಾವಿ ) :

ಐ ಎಮ್ ಇ ಆರ್ ಬೆಳಗಾವಿ

ಈ ಸಂಸ್ಥೆಯು ಬೆಳಗಾವಿ ಕರ್ನಾಟಕ ಲಾ ಸೊಸೈಟಿಯ ಒಂದು ಅಂಗವಾಗಿದೆ. ವೃತ್ತಿಪರವಾಗಿ ತರಬೇತಿ ಹೊಂದಿದ ಮ್ಯಾನೇಜ್‍ರಗಳನ್ನು ಗುರುತಿಸಿ ಅವರ ಬುದ್ಧಿಶಕ್ತಿ ಇನ್ನೂ ಉತ್ಕೃಷ್ಟಗೊಳಿಸುವುದು ಈ ಸಂಸ್ಥೆಯ ಕಾರ್ಯವಾಗಿದೆ. ಈ ಕಾಲೇಜು ಎ.ಐ.ಸಿ ಟಿ ಇ ಇವರಿಂದ ಅನುಮೋದಿಸಲ್ಪಟ್ಟಿದೆ. ಈ ಕಾಲೇಜನ್ನು 1991 ರಲ್ಲಿ ಡಾ||ಪಿ.ಸಿ.ಶೇಜವಾಲಕರ ಹಾಗೂ ಇತರೆ ನಿರ್ವಹಣೆ ತಜ್ಞರು ಹಾಗೂ ಶೆಕ್ಷಣಿಕ ತಜ್ಞರ ಸಹಾಯದ ಮೇರೆಗೆ ಈ ಕಾಲೇಜು ಸ್ಥಾಪನೆಗೊಂಡಿದೆ. ಉದ್ದಿಮೆ, ವ್ಯಾಪರ ಹಾಗೂ ಇತರೆ ಅಭಿವೃದ್ಧಿ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು, ಅತ್ಯುತ್ತಮ ನಿರ್ವಹಣಾ ಶಿಕ್ಷಣವನ್ನು ನೀಡುವುದೇ ಇದರ ಮುಖ್ಯ ಉದ್ದೇಶವಾಗಿದೆ. ಈ ಸಂಸ್ಥೆಯು ಬೆಳಗಾವಿಯ ಹಿಂದವಾಡಿ ಪ್ರದೇಶದಲ್ಲಿ ಇರುತ್ತದೆ. ಈ ಸಂಸ್ಥೆ ಯಾವಾಗಲೂ ಉದ್ದಿಮೆ ಲೋಕದಲ್ಲಿನ ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುತ್ತದೆ ಅಂದರೆ ಜಾಗತೀಕರಣದಲ್ಲಿನ ಸ್ಥರ್ದೆ, ಬದಲಾಗುತ್ತಿರುವ ತಂತ್ರಜ್ಞಾನ, ಇಂಟರ್‍ನೆಟ್ ಕ್ರಾಂತಿ ಹಾಗೂ ಪದೇ ಪದೇ ಬದಲಾಗುತ್ತಿರುವ ಪರಿಸರ ಈ ಬಗ್ಗೆ ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುತ್ತದೆ. 
ಕರ್ನಾಟಕ ಲಾ ಸೊಸೈಟಿಯು ಬೆಳಗಾವಿಯಲ್ಲಿ ಎರಡೂವರೆ ಎಕರೆ ಭೂಮಿಯನ್ನು ಹೊಂದಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಗುಣಮಟ್ಟದ ಪ್ರಕಾರ ತನ್ನದೇ ಆದಂತಹ ಕ್ಯಾಂಪಸ್ ಪ್ರದೇಶವನ್ನು ಹೊಂದಿದೆ. ಅಲ್ಲದೇ 1999-2000 ರಿಂದ ಇಲ್ಲಿ ಎಂ.ಬಿ.ಎ. ಕೋರ್ಸ್‍ನ್ನು ಪ್ರಾರಂಭಿಸಲಾಯಿತು. ಈ ಕೋರ್ಸು ಕರ್ನಾಟಕ ವಿಶ್ವವಿಧ್ಯಾಲಯ, ಧಾರವಾಡ ಇವರ ಅಧೀನದಲ್ಲಿ ಬರುತ್ತದೆ. ಇಲ್ಲಿನ ಎಲ್ಲ ಕೆಲಸ ಕಾರ್ಯಗಳಿಗೂ ಆಲ್ ಇಂಡಿಯಾ ಕೌನ್ಸಿಲ್ ಆಪ್ ಇಂಡಿಯಾ ಟೆಕ್ನಿಕಲ್ ಎಜುಕೇಶನ್, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಕೇಂದ್ರ ಸರ್ಕಾರ, ನವದೆಹಲಿ, ಇವರಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಈ ಸಂಸ್ಥೆಯು Association of Indian Management Schools, All India Management Association And American Management Association, New York, USA   ಈ ಎಲ್ಲ ಸಂಸ್ಥೆಗಳ ಸದಸ್ಯತ್ವವನ್ನು ಹೊಂದಿದೆ. ಈ ಎಂ.ಬಿ.ಎ. ಕೋರ್ಸ್ ಉತ್ಪಾದನೆ, ಆರ್ಥಿಕತೆ, ಮಾರುಕಟ್ಟೆ, ಮಾನವ ಸಂಪನ್ಮೂಲ ಇನ್ನಿತರೆ ವಿಷಯಗಳನ್ನು ಸಹ ಒಳಗೊಂಡಿದೆ. ಇದು ವಿದ್ಯಾರ್ಧಿಗಳಿಗೆ ನಿರ್ವಹಣಾ ಶಿಕ್ಷಣದಲ್ಲಿ ಭದ್ರ ಬುನಾಧಿಯನ್ನು ನಿರ್ಮಿಸಲು ಸಹಕಾರಿ ಮಾಡುತ್ತದೆ. ಈ ಮಹಾವಿದ್ಯಾಲಯವು ಕಂಪ್ಯೂಟರ್ ಸೆಂಟರ್, ಹಾಸ್ಟೆಲ್ಸ್, ಕ್ಯಾಂಪಸ್, ಗ್ರಂಥಾಲಯ ಇನ್ನಿತರೆ ಎಲ್ಲ ಸೌಕರ್ಯಗಳನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಅಂಚೆ ಪೆಟ್ಟಿಗೆ ಸಂಖ್ಯೆ: 504, ನಂ77, ವಡಗಾಂವ ರಸ್ತೆ, ಆದರ್ಶನಗರ, ಹಿಂದವಾಡಿ, ಬೆಳಗಾವಿ,590001. INDIA. 
ದೊ: 0831 – 2405511 (O), 2405512 (Dir)
ಫ್ಯಾಕ್ಸ್ 0831 – 2481745, 
Email : directoredu[at]klsimer[dot]edu
ವೆಬ್ ಸೈಟ್: http://www[dot]klsimer[dot]edu

ಕೆ.ಎಲ್.ಇ. ಸಂಸ್ಥೆಯ ಬಿಸನೆಸ್ ಎಡ್ಮಿನಿಸ್ಟ್ರೇಶನ್ ಕಾಲೇಜು. – B.B.A (Belagavi)

ಕೆ ಎಲ್ ಇ ಬಿ ಬಿ ಎ ಮಹಾವಿದ್ಯಾಲಯ ಬೆಳಗಾವಿ

ಕೆ.ಎಲ್.ಇ ಸಂಸ್ಥೆಯ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ಈ ಕಾಲೇಜು 1996 ರಲ್ಲಿ ಬೆಳಗಾವಿಯಲ್ಲಿ ಕೆ.ಎಲ್.ಇ ಸಂಸ್ಥೆ ವತಿಯಿಂದ ಸ್ಥಾಪಿಸಲ್ಪಟ್ಟಿತ್ತು. ಇದು 3 ವರ್ಷದ ಕೋರ್ಸ್ ಆಗಿದ್ದು, ಇದು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರ ಸ್ವಾಮ್ಯತೆಗೆ ಒಳಪಡುತ್ತದೆ. ಈ ಕಾಲೇಜಿನಲ್ಲಿ ಇತ್ತೀಚಿನ ಆಡಿಯೋ-ವಿಸುವಲ್ ನೆರವಿನ ಮುಖಾಂತರ ಶಿಕ್ಷಣವನ್ನು ಸಹ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಅಲ್ಲದೇ ಇಲ್ಲಿ 1500 ಪುಸ್ತಕ ಹೊಂದಿರುವ ಸುಸಜ್ಜಿತ ಗ್ರಂಥಾಲಯ ವ್ಯವಸ್ಥೆ ಸಹ ಇದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕಾಲೇಜ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಶನ್
ಲಿಂಗರಾಜ್ ಕಾಲೇಜ್, ಬೆಳಗಾವಿ -590001
ಕರ್ನಾಟಕ, ಬೆಳಗಾವಿ. 
Tel : 0831 – 2402351.

ಆರ್.ಪಿ.ಡಿ. ಕಾಲೇಜ್ ಟಿಳಕವಾಡಿ ಬೆಳಗಾವಿ

ಆರ್ ಪಿ ಡಿ ಬಿ ಬಿ ಎ ಮಹಾವಿದ್ಯಾಲಯ

ಸೌಥ್ ಕೊಂಕಣ ಎಜುಕೇಶ್‍ನ್ ಸಂಸ್ಥೆಯು 1944 ರಲ್ಲಿ ಸ್ಥಾಪಿಸ್ಲಪಟ್ಟಿತ್ತು. ಇದು ತನ್ನ ಮೊದಲ ಶೈಕ್ಷಣಿಕ ಸಂಸ್ಥೆಯನ್ನು ರಾಣಿ ಪಾರ್ವತಿದೇವಿ ಕಾಲೇಜ್ ಎಂಬ ಹೆಸರಿಯಲ್ಲಿ 1945 ರಲ್ಲಿ ಸ್ಥಾಪಿಸಿತ್ತು. (ಆರ್.ಪಿ.ಡಿ). ಈ ಕಾಲೇಜ್ ಕ್ಯಾಂಪಸ್ 30 ಎಕರೆ ನಷ್ಟು ಒಳಗೊಂಡಿದ್ದು, ಇದು ತನ್ನದೇ ಆದ 12 ಇತರೆ ಶೆಕ್ಷಣ ಸಂಸ್ಥೆಗಳನ್ನು ಹೊಂದಿದೆ. 
ಈ ಸಂಸ್ಥೆಯು ಆಧುನಿಕ ಶಿಕ್ಷಣವನ್ನು ನೀಡು ಸಂಬಂಧವಾಗಿ ಬಿಸಿನೆಸ್ ಅಡ್ಮಿನಿಸ್ಟ್ರೇಷ್‍ನ್ ಎಂಬ ಕೋರ್ಸ್‍ನ್ನು 2007 ರಲ್ಲಿ ಆರ್.ಪಿ.ಡಿ. ಕಾಲೇಜ್‍ನಲ್ಲಿ ಪ್ರಾರಂಭಿಸಿತ್ತು. ಇದು 3 ವರ್ಷದ ಕೋರ್ಸ್ ಆಗಿದ್ದು, ರಾಣಿ ಚೆನ್ನಾಮ್ಮ ವಿದ್ವವಿದ್ಯಾಲಯ, ಬೆಳಗಾವಿ ಇವರ ಸ್ವಾಮ್ಯತೆಗೆ ಒಳಪಡುತ್ತದೆ. 
ಇಲ್ಲಿ 24 ಗಂಟೆ ಬ್ರಾಡ್‍ಬ್ಯಾಂಡ್ ಇಂಟರ್‍ನೆಟ್ ಸೌಲಭ್ಯ ಹೊಂದಿರುವ ಕಂಪ್ಯೂಟರ್ ಕೊಠಡಿ, ಹಾಗೂ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾದ ಹಾಸ್ಟೆಲ್ ವ್ಯವಸ್ಥೆ, ಗ್ರಂಥಾಲಯ, ಆಟದ ಮೈದಾನ ಇನ್ನಿತರೆ ಸೌಕರ್ಯಗಳನ್ನು ಸಹ ಒಳಗೊಂಡಿದೆ. ವಿವಿಧ ಕಂಪನಿಗಳಿಗೆ ಇಲ್ಲಿ ಕ್ಯಾಂಪಸ್ ಸಂದರ್ಶನ ನಡೆಸಲು ಸಹ ಅವಕಾಶವಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿ ಬದುಕಿನಲ್ಲಿ ಒಳ್ಳೆಯ ಅವಕಾಶಗಳನ್ನು ಕಲ್ಪಿಸಲು ಸಹಾಯ ಮಾಡುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ನಿರ್ದೇಶಕರು, ಕಾಲೇಜ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಶನ್, ಆರ್.ಪಿ.ಡಿ. ಕಾಲೇಜ್ ಬೆಳಗಾವಿ- 590006.
ದೊ.ಸಂ. 0831-4216617  ಫ್ಯಾಕ್ಸ 0831-2485910 ವಿ-ಅಂಚೆ– rpdbba[at]rediffmail[dot]com