ಬೆಳಗಾವಿ ಜಿಲ್ಲೆಯು ವರದಾನದಂತಿರುವ ಅತ್ಯುತ್ತಮ ಆರೋಗ್ಯ ಸಂಸ್ಥೆಗಳನ್ನು ಹೊಂದಿದ್ದು ಈ ಆರೋಗ್ಯ ಸಂಸ್ಥೆಗಳು ಬೆಳಗಾವಿ ಜಿಲ್ಲೆಯ ಜನತೆಗಷ್ಟೆ ಅಲ್ಲದೆ ರಾಜ್ಯದ ಎಲ್ಲ ಭಾಗದ ಹಾಗೂ ಹೊರರಾಜ್ಯದ ಜನತೆಗೂ ಆರೋಗ್ಯ ಸೇವೆಯನ್ನು ಒದಗಿಸುತ್ತಿವೆ ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರಯು ಎಷ್ಯಾದಲ್ಲಿಯೇ ಎರಡನೇಯ ಅತಿ ದೊಡ್ಡ ಆಸ್ಪತ್ರೆಯಾಗಿದ್ದು ಇಲ್ಲಿ ಎಲ್ಲ ತರಹದ ಅಧುನಿಕ ಸೌಲಭ್ಯಗಳು ಹಾಗೂ ಚಿಕಿತ್ಸೆಗಳು ಲಭ್ಯವಿರುತ್ತವೆ ಇತ್ತೀಚಿಗೆ ಕ್ಯಾನ್ಸರ್ ಸಂಶೋಧನಾ ಕೇಂದ್ರವು ಸ್ಥಾಪನೆಯಾಗಿದ್ದು ಇದರಿಂದಾಗಿ ರೋಗಿಗಳ ಉತ್ತಮ ಸೇವೆಗೆ ನೆರವಾಗಿದೆ ಅಲ್ಲದೇ ನಗರದಲ್ಲಿರುವ ಎ.ಎಮ್.ಶೇಖ ಹೋಮೀಯೋಪತಿ ಹಾಗೂ ವೈದ್ಯಕೀಯ ಕಾಲೇಜಿನ ಆರೋಗ್ಯ ಸೇವೆಯು ದೇಶದಲ್ಲಿಯೇ ಮೂರನೇ ಕ್ರಮಾಂಕದಲ್ಲಿದೆ ಇದಲ್ಲದೆ ನಗರದಲ್ಲಿಯ ಪ್ರಸಿದ್ದ ವೈದ್ಯರು ಹಾಗೂ ಇನ್ನಿತರ ಆರೋಗ್ಯ ಸಂಸ್ಥೆಗಳು ಉತ್ತಮ ಆರೋಗ್ಯ ಸೇವೆ ಸಲ್ಲಿಸುವಲ್ಲಿ ಮುಂಚೂಣಿಯಲ್ಲಿದ್ದು ಬೆಳಗಾವಿಯನ್ನು ಆರೋಗ್ಯವಂತ ನಗರವನ್ನಾಗಿಸಿದೆ.
ಪ್ರಮುಖ ಆರೋಗ್ಯ ಸೌಲಭ್ಯ ಕೇಂದ್ರಗಳು
- ಎಲ್.ಇ.ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ.
- ಕೆ.ಎಲ್.ಇ. ಸಂಸ್ಥೆಯ ವಿಶ್ವನಾಥ ಕತ್ತಿ ದಂತ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ
- ಕಾನ್ಸರ ಆಸ್ಪತ್ರೆ – ಬೆಳಗಾವಿ
- ಇನ್ನಿತರ ಆರೋಗ್ಯ ಸಂಸ್ಥೆಗಳು
ಡಾ: ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ
ಡಾ: ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವು ಹಲವು ಪ್ರಮುಖ ಸೇವೆಗಳಾದ ಹೈ ಎಂಡ ಎಕ್ಸಾ ಕಾರ್ಪೊರಿಯಲ್, ಶಾಕ ವೇವ ಲಿಡೊಟ್ರಿಪ್ಸ, ಗ್ಯಾಮಾ ಕ್ಯಾಮರಾ, ಇನಸಿವ್ ಕಾರ್ಡಿಯಾಲಾಜಿ, ಕಾರ್ಡಿಯಾಕ ಸರ್ಜರಿ, ರೀನಲ್ ಡಯಾಲಿಸಿಸ್ ಇತ್ಯಾದಿಗಳನ್ನು ಹೊಂದಿದೆ. ಕೆ.ಎಲ್.ಇ. ಸಂಸ್ಥೆಯು ಅಪರೇಶನ್ ಥೆಟರ್, ಹಾಸ್ಪಿಟಲ್ ವಾರ್ಡ, ಡಾಕ್ಟರ್ಸ ವಿವರ, ಸಂಶೋದನಾ ಚಟುವಟಿಕೆಗಳು, ಅಧುನಿಕ ಸೌಲಭ್ಯದ ನಿಗಾ ಘಟಕಗಳು, ಇಂಟೆನ್ಸೀವ್ ಕಾರೋನರಿ ಸೌಲಭ್ಯ ನಿಗಾ ಘಟಕಗಳು , ಕಾರ್ಡಿಯೊ ಥೊರಾಸಿಕ್ ಶಸ್ತ್ರ ಚಿಕಿತ್ಸಾ ಸೌಲಭ್ಯ ನಿಗಾ ಘಟಕಗಳು, ಶಸ್ತ್ರ ಚಿಕಿತ್ಸಾ ಸೌಲಭ್ಯ ನಿಗಾ ಘಟಕಗಳು, ವೈದ್ಯಕೀಯ ತೀವ್ರ ನಿಗಾ ಘಟಕಗಳು, ಪ್ರಯೋಗಾಲಯಗಳು, ರಕ್ತ ಭಂಡಾರ, ರುಗ್ಣವಾಹನ ಸೇವೆಗಳು, ಔದ್ಯೋಗಿಕೃತ ಶವಾಗಾರ, ನೀರು ಸಂಸ್ಕರಣಾ ಘಟಕ, ಚರಂಡಿ ನೀರು ಸಂಸ್ಕರಣಾ ಘಟಕಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತವೆ.
ಕೆ.ಎಲ್.ಇ. ಸಂಸ್ಥೆಯ ವಿಭಾಗಗಳಾದ ಎ.ಆರ್.ಸಿ., ಹೃದಯ ಶಸ್ತ್ರ ಚಿಕಿತ್ಸಾಲಯ ಸಿ.ಡಿ.ಸಿ., ಸಕ್ಕರೆ ಕಾಯಿಲೆ ವಿಭಾಗ, ಇ.ಎನ್.ಟಿ. ವಿಭಾಗ, ಪೆಸಿಯಾ ಮಾಕ್ಸಲರಿ ಶಸ್ತ್ರ ಚಿಕಿತ್ಸೆ, ಮತ್ತು ದಂತ ಚಿಕಿತ್ಸಾ ವಿಭಾಗ, ಜಠರ ವಿಭಾಗ, ನರರೋಗ ವಿಭಾಗ, ಮೂತ್ರ ಪಿಂಡ ಶಾಸ್ತ್ರ, ನವಜಾತಶಿಶು ಚಿಕಿತ್ಸಾ ವಿಭಾಗ, ಸ್ತ್ರೀ ರೋಗ ಚಿಕಿತ್ಸಾ ವಿಭಾಗ, ಅಸ್ಥಿ ಚಿಕಿತ್ಸಾ ವಿಭಾಗ, ನೇತ್ರ ವಿಜ್ಞಾನ ವಿಭಾಗ, ಚಿಕ್ಕಮಕ್ಕಳ ಶೂಶ್ರಷೆ ವಿಭಾಗ, ಫಿಜಿಯೋಥೆರಪಿ, ಪ್ಲಾಸ್ಟಿಕ ಶಸ್ತ್ರಕ್ರಿಯೆ, ಮಾನಸಿಕ ರೋಗ ಚಿಕಿತ್ಸಾ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ, ಚರ್ಮ ಹಾಗೂ ಗುಪ್ತರೋಗ, ಮೂತ್ರಶಾಸ್ತ್ರ ಇತ್ಯಾದಿ ವಿಭಾಗಗಳನ್ನು ಅಲ್ಲದೇ ಅಧುನಿಕ ವಿಶೇಷತಯುಳ್ಳ ಗ್ರಂಥ ವಿಜ್ಞಾನ, ಅಂತಸ್ರಾವ ಹಾಗೂ ಸೂಪಶಾಸ್ತ್ರ ವಿಭಾಗಗಳನ್ನು ಆಸ್ಪತ್ರೆಯ ಸೇವೆಗಳಿಗೆ ಸೇರಿಸಲಾಗಿದೆ. ಮಕ್ಕಳ ಮಾನಸಿಕ ಹಾಗೂ ಧೈಹಿಕ ನ್ಯೂನತೆ ಹಾಗೂ ವಿಶೇಷ ಮಕ್ಕಳ ಅಭಿವೃದ್ಧಿ ವಿಭಾಗವನ್ನು ತೆರೆಯಲಾಗಿದೆ . ಉತ್ತಮ ಗುಣಮಟ್ಟದ ಅಸ್ಥಿ ಚಿಕಿತ್ಸಾ ವಿಭಾಗ, ವಿಶೇಷ ಸುದಂತಯೋಜಕ ಹಾಗೂ ಪ್ರಾಸ್ಫೆಟಿಕ ಘಟಕ, ದ್ವನಿ ಚಿಕಿತ್ಸಾ ಕೇಂದ್ರ ಮತ್ತು ಇನ್ನಿತರ ಸೌಲಭ್ಯಗಳಾದ ವೈದ್ಯಕೀಯ ಅನಿಲ ಕೊಳವೆಗಳನ್ನು ಸಹ ಜೋಡಿಸಲಾಗಿದೆ. 500 ಎಂ.ಎ. ಮೊಬೈಲ್ ಎಕ್ಸರೇ ಮಶೀನ್ ಹೃದಯ ಬಡಿತ ಸಂಬಂಧಿತ ಲಕ್ಷಣ ತೋರುವ ಮಾನಿಟರಗಳು, ಪೈಬ್ರಿಲೇಟರ್ಸ, 03 ವಾತಾಯನ ಕಿಂಡಿಗಳು ಮತ್ತು ಪ್ರತ್ಯೇಕ ಶಸ್ತ್ರ ಚಿಕಿತ್ಸಾ ಕೊಠಡಿಗಳ ಸಂಕೀರ್ಣವು ವಿಶೇಷವಾಗಿ ಅಪಘಾತ ಹಾಗೂ ತುರ್ತು ಚಿಕಿತ್ಸಾ ಕಾರ್ಯಗಳಿಗಾಗಿ ಸಂಯೋಜಿಸಲಾಗಿದೆ.
24 ಗಂಟೆಗಳ ಕಾಲ ಅಪಘಾತ ಹಾಗೂ ತುರ್ತು ಚಿಕಿತ್ಸಾ ಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು ಸದರಿ ಕಾರ್ಯಕ್ಕೆ ಅನುವಾಗುವಂತೆ ಔಷದಿ ವಿಭಾಗ ಪ್ರಯೋಗಾಲಯ, ಎಕ್ಸರೇ ಹಾಗೂ ಸಿ.ಟಿ.ಸ್ಕಾನ್ ಘಟಕಗಳು ಮತ್ತು ರಕ್ತ ಭಂಡಾರಗಳನ್ನು ಸಂಯೋಜಿಸಲಾಗಿದೆ ಇದರಿಂದಾಗಿ ಎಲ್ಲ ತರಹದ ಚಿಕಿತ್ಸಾ ಸೌಲಭ್ಯಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ವ್ಯೆವಸ್ಥೆಗೊಳಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸ ಬೇಕಾದ ವಿಳಾಸ
ಕೆ.ಎಲ್.ಇ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ
ನೆಹರು ನಗರ ಬೆಳಗಾವಿ-590010 ಕರ್ನಾಟಕ (ಭಾರತ)
ದೊ.ಸಂ:0831-2473777
ವಿ ಅಂಚೆ klehosp[at]salyam[dot]net[dot]in
ವೆಬ್ ಸೈಟ್: http://www[dot]klehospital[dot]org
ಕೆ.ಎಲ್.ಇ. ವಿಶ್ವನಾಥ ಕತ್ತಿ ದಂತ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ
ಕೆ.ಎಲ್.ಇ. ಸಂಸ್ಥೆಯು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ವೃತ್ತಿ ಪರತೆ ಸಮೀಕರಿಸುವ ಹಾಗೂ ಉರ್ಜಿತಗೊಳಿಸಲು ಜ್ಞಾನ ಮತ್ತು ಕಲ್ಪನೆಯುಕ್ತ ಮಾದರಿಯ ಪರಿಕಲ್ಪನೆಯನ್ನು ನೀಡುವ ನಿಟ್ಟಿನಲ್ಲಿ ದಂತ ವಿಜ್ಞಾನ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯನ್ನು ಸಾಕಾರಗೊಳಿಸಿದೆ. ಸದರಿ ಸಂಸ್ಥೆಯು ದೇಶದಲ್ಲಿ ಮುಂಚೂಣಿಯಲ್ಲಿದ್ದು ಹಾಗೂ ಎಶಿಯಾ ಖಂಡದಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ದಂತ ಮಹಾವಿದ್ಯಾಲಯವು 1985 ರಲ್ಲಿ ಪ್ರಾರಂಭಗೊಂಡಿದ್ದು ದೇಶದ ಮೂಲೆ-ಮೂಲೆಗಳಿಂದ ವಿದ್ಯಾರ್ಥಿಗಳು ಇಲ್ಲಿ ಬಂದು ವಿದ್ಯಾರ್ಜನೆ ಕೈಗೊಳ್ಳುತ್ತಿದ್ದಾರೆ ಮಹಾವಿದ್ಯಾಲಯವು ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದಿಂದ ಮಾನ್ಯತೆಯನ್ನು ಪಡೆದಿದೆ. ಹಾಗೂ ರಾಜೀವ ಗಾಂಧಿ ಆರೋಗ್ಯ ಸಂಸ್ಥೆ ಬೆಂಗಳೂರುದಿಂದಲೂ ಮಾನ್ಯತೆಯನ್ನು ಪಡೆಯುವದರೊಂದಿಗೆ ಭಾರತೀಯ ದಂತ ಮಂಡಳಿಯಿಂದಲೂ 1989 ರಲ್ಲಿ ದಂತ ಪದವಿ ಪ್ರದಾನಿಸಲು ಮಾನ್ಯತೆಯನ್ನು ಹೊಂದಿದೆ. ಸಂಸ್ಥೆಯು ಅನೇಕ ಉತ್ತಮ ಸೌಲಭ್ಯಗಳಾದ ವಸತಿ ನಿಲಯ, ಸುಂದರ ಕ್ಯಾಂಪಸ, ಕ್ಯಾಂಟೀನ್, ಅಡಿಟೋರಿಯಂ ಹಾಗೂ ವಿವಿಧ ದಂತ ವಿಭಾಗಗಳನ್ನು ಹೊಂದಿದೆ ಸುಮಾರು 1000 ವಿದ್ಯಾರ್ಥಿಗಳು ದಂತ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದಿರುತ್ತಾರೆ.
ದಂತ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು ದಂತ ಚಿಕಿತ್ಸೆ, ದಂತ ಯಂತ್ರ ಶಾಸ್ತ್ರ ಮತ್ತು ದಂತ ಆರೋಗ್ಯ ಶಾಸ್ತ್ರ ಇತ್ಯಾದಿ ಚಿಕಿತ್ಸೆಗಳನ್ನು ಒದಗಿಸುತ್ತಿದ್ದು ಸಂಸ್ಥೆಯು 2003 ಅಕ್ಟೋಬರನಿಂದ ವಿಶಿಷ್ಟ ಚಿಕಿತ್ಸೆಗಳಾದ ಪ್ರಾಸ್ಟೊಡೊಂಟಿಕ್ಸ ಪೆರಿಯೋಡೊಂಟಿಕ್ಸ ಬಾಯಿ ಹಾಗೂ ಮುಖ ಚಿಕಿತ್ಸೆ, ಸಾಂಪ್ರದಾಯಕ ದಂತ ಚಿಕಿತ್ಸೆ, ಓರಲ್ ಪೆಥೊಲಾಜಿ, ಸಮುದಾಯ ದಂತ ಚಿಕಿತ್ಸೆ, ಬಾಯಿ ವಿಕಿರಣ ಶಾಸ್ತ್ರಗಳನ್ನು ಅಳವಡಿಸಿಕೊಂಡಿದೆ.
ಸಂಸ್ಥೆಯು ಹಲವಾರು ದಂತ ಚಿಕಿತ್ಸಾ ಶಿಬಿರಗಳನ್ನು ಅಯೋಜಿಸಿದ್ದು ಅಕ್ಟೋಬರ 18 ರಂದು ಅಲುಮ್ನಿ ಸಮಾರಂಭವನ್ನು ಆಯೋಜಿಸಿದೆ ದಂತ ವೈದ್ಯಕೀಯ ಸಂಸ್ಥೆಯು ಬಾಯಿ ಚಿಕಿತ್ಸಾ ಔಷಧಿ ವಿಭಾಗ, ವಿಕಿರಣ ಶಾಸ್ತ್ರ ವಿಭಾಗ, ಬಾಯಿ ಮತ್ತು ಮುಖ ಶಾಸ್ತ್ರ ಚಕಿತ್ಸಾ ವಿಭಾಗ, ಸಾಂಪ್ರದಾಯಿಕ ದಂತ ಶಾಸ್ತ್ರ ವಿಭಾಗ, ಪ್ರಾಸ್ಟೊಡೊಂಟಿಕ್ಸ, ವಿಕಿರಣ ಶಾಸ್ತ್ರ ವಿಭಾಗ, ಸೂಕ್ಷ್ಮ ಜೀವಿ ಶಾಸ್ತ್ರ ವಿಭಾಗ, ಮತ್ತು ಸಮುದಾಯಕ ಸೂಕ್ಷ್ಮಜೀವಿ ಶಾಸ್ತ್ರದ ವಿಭಾಗಳನ್ನು ಹೊಂದಿದೆ.
ಹೆಚ್ಚಿನ ಮಾಹಿತಿ ಕುರಿತು ಸಂಪರ್ಕಿಸಬೇಕಾದ ವಿಳಾಸ:
ಪ್ರಾಂಶುಪಾಲರು ಕೆ.ಎಲ್.ಇ. ಸಂಸ್ಥೆಯ ದಂತ ಆಸ್ಪತ್ರೆ ಮತ್ತು ಸಂಶೋಧನಾ ಕೇಂಧ್ರ ಬೆಳಗಾವಿ 590010 ಕರ್ನಾಟಕ (ಭಾರತ)
ದೊ ಸಂ:091-831-2470333, 2470362
ಫ್ಯಾಕ್ಸ :091-831-2470640
ವಿ-ಅಂಚೆ: principal[at]kids_bgm[dot]org
ವೆಬ್ ಸೈಟ: http://www[dot]kids_bgm[dot]org
ಬೆಳಗಾವಿ ಕ್ಯಾನ್ಸರ್ ಆಸ್ಪತ್ರೆ:
ಕ್ಯಾನ್ಸರ ಆಸ್ಪತ್ರೆಯು ಎತ್ತರದ ಪ್ರದೇಶದ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದು ಬೆಳಗಾವಿ ಕೋಟೆಯ ಎದುರಿನಲ್ಲಿರುವ ಕೋಟೆಕೆರೆಯ ಹಿಂಭಾಗದಲ್ಲಿದೆ. ಈ ತರಹದ ಆರೋಗ್ಯ ಸಂಸ್ಥೆ ಬೆಳಗಾವಿ ನಗರದ ವಿಶೇಷತೆಯಾಗಿದೆ. ಈ ಆಸ್ಪತ್ರೆಯಲ್ಲಿ ಗಾಳಿ ಹಾಗೂ ಬೆಳಕಿನ ವಿಶೇಷ ವ್ಯೆವಸ್ಥೆಯಿದ್ದು ಇದರಿಂದಾಗಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ರೋಗ ಮುಕ್ತಗೊಳ್ಳಲು ಅನುಕೂಲಕರವಾಗಿದೆ ಈ ಆಸ್ಪತ್ರಯು ಕೇಂದ್ರ ಬಸ್ ನಿಲ್ದಾಣದಿಂದ 1.5 ಕೀ.ಮೀ. ಅಂತರದಲ್ಲಿದ್ದು ವಾಹನ ನಿಲುಗಡೆಗೆ ವ್ಯೆವಸ್ಥಿತ ಸೌಕರ್ಯವನ್ನು ಕಲ್ಪಿಸಿದೆ.
ಆಸ್ಪತ್ರೆಯು 40 ಹಾಸಿಗೆಯ ಸಾಮರ್ಥ್ಯ ಹೊಂದಿದ್ದು, ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ಕೊಠಡಿ ಹಾಗೂ ಐ.ಸಿ.ಯು. ವನ್ನು ಒಳಗೊಂಡಿದೆ. ಆಸ್ಪತ್ರೆಯಲ್ಲಿ ರಕ್ತ ಪರೀಕ್ಷಾ ಪ್ರಯೋಗಾಲಯ, ಎಕ್ಸರೇ, ಎಂಡೊಸ್ಕೋಪಿ ಹಾಗೂ ಅಲ್ಟ್ರಾ ಸೊನೋಗ್ರಾಪಿ ಸೌಲಭ್ಯವನ್ನು ಪಡೆಯಬಹುದಾಗಿದೆ. ಆಸ್ಪತ್ರೆಯಲ್ಲಿ ಅಂತಿಮ ಹಂತದಲ್ಲಿರುವ ರೋಗಿಗಳಿಗೆ ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ಪಥವನ್ನು ನಿರ್ಮಿಸಲಾಗಿದ್ದು, ಇದರಿಂದಾಗಿ ಇನ್ನುಳಿದ ರೋಗಿಗಳಿಗೆ ಕುಟುಂಬ ಸದಸ್ಯರುಗಳು ಹಾಗೂ ಇತರರಿಗೆ ಯಾವದೇ ಬಾಧ್ಯತೆ ಉಂಟಾಗದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಆಸ್ಪತ್ರೆಯು ಶಸ್ತ್ರ ಚಿಕಿತ್ಸಾ ವಿಭಾಗ, ಗ್ರಂಥಿ ವಿಜ್ಞಾನ ವಿಭಾಗ, ವಿಕಿರಣ ಚಿಕಿತ್ಸಾ ವಿಭಾಗ, ವೈದ್ಯಕೀಯ ಗ್ರಂಥಿ ವಿಭಾಗ ಹಾಗೂ ಟೆಲಿ ಮೆಡಿಸಿನ್ ವಿಭಾಗಗಳನ್ನು ಒಳಗೊಂಡಿದೆ. ಈ ಆಸ್ಪತ್ರೆಯ ಸೌಲಭ್ಯದಿಂದಾಗಿ ನೂರಾರು ಕಿ.ಮೀ. ದೂರದ ಆಸ್ಪತ್ರೆಗೆ ಈ ಭಾಗದ ರೋಗಿಗಳು ಪ್ರಯಾಣಿಸುವದರಿಂದ ಮುಕ್ತಗೊಂಡಿರುತ್ತಾರೆ.
ಇತರೆ ಆರೋಗ್ಯ ಸಂಸ್ಥೆಗಳು
ಜಿಲ್ಲಾ ಆಸ್ಪತ್ರೆ ಬೆಳಗಾವಿ: ಈಗಿನ ಜಿಲ್ಲಾ ಆಸ್ಪತ್ರೆ ಬೆಳಗಾವಿಯು 1859 ಕ್ಕಿಂತ ಮುಂಚೆ ಸಾರ್ವಜನಿಕ ಆಸ್ಪತ್ರೆ ಎಂದು ಪ್ರಸಿದ್ದಿಯನ್ನು ಹೊಂದಿತ್ತು. ಆಸ್ಪತ್ರೆಯು ಜಿಲ್ಲೆಯ ರೋಗಿಗಳು ಸೇರಿದಂತೆ ನೆರೆಯ ರಾಜ್ಯಗಳ ಗಡಿಭಾಗದ ಹಳ್ಳಿಯ ಜನರಿಗೂ ಆರೋಗ್ಯ ಸೌಲಭ್ಯ ಒದಗಿಸುತ್ತಿದೆ. ಜವಾಹರಲಾಲ್ ವೈದ್ಯಕೀಯ ಮಹಾವಿದ್ಯಾಲಯವನ್ನು ಆಸ್ಪತ್ರೆಗೆ ಸಂಯೋಜಿಸಲಾಗಿದೆ. ಪ್ರಸ್ತುತ ಆಸ್ಪತ್ರೆಯು 1000 ಹಾಸಿಗೆ ಸಾಮರ್ಥ್ಯವನ್ನು ಹೊಂದಿದ್ದು ವಿಶೇಷ ಸೇವೆಗಳಾದ ಔಷದಿ, ಶಸ್ತ್ರಚಿಕಿತ್ಸೆ, ಚಿಕ್ಕಮಕ್ಕಳ ಆರೈಕೆ, ಪ್ರಸೂತಿ ಹಾಗೂ ಸ್ತ್ರೀ ರೋಗ ಚಿಕಿತ್ಸೆ ಕಿವಿ, ಮೂಗು, ಹಾಗೂ ಗಂಟಲು ಚಿಕಿತ್ಸೆ, ಚರ್ಮವ್ಯಾದಿ, ರಕ್ತ ಪರೀಕ್ಷಾ, ಮಾನಸಿಕ ಆರೋಗ್ಯ ಹಾಗೂ ದಂತ ಚಿಕಿತ್ಸಾಗಳನ್ನು ಹೊಂದಿದೆ.
ಸಾರ್ವಜನಿಕ ಆಸ್ಪತ್ರೆ (ಗೋಕಾಕ): ಗೋಕಾಕ ನಗರದ ಸಾರ್ವಜನಿಕ ಆಸ್ಪತ್ರೆಯು ಜಿಲ್ಲೆಯ ಅತಿ ಹಳೆಯದಾದ ಆಸ್ಪತ್ರೆಯಾಗಿದ್ದು, ಇದು 1865 ರಲ್ಲಿ ಪ್ರಾರಂಭಗೊಂಡಿದೆ. 1966 ರಲ್ಲಿ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಾಣವಾಗಿದ್ದು, 75 ಹಾಸಿಗೆಯ ಸೌಲಭ್ಯವನ್ನು ಹೊಂದಿದೆ.
ಕರ್ನಾಟಕ ಆರೋಗ್ಯಧಾಮ (ಘಟಪ್ರಭಾ): ಆಸ್ಪತ್ರೆಯು 1935 ರಲ್ಲಿ ಸ್ಥಾಪನೆಯಾಗಿದ್ದು, ಸುಮಾರು 195 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಹರಡಿದೆ. 1985ರಲ್ಲಿ ಆಸ್ಪತ್ರೆಯು ಸುಸಜ್ಜಿತಗೊಂಡು 166 ಹಾಸಿಗೆಯ ಸಾಮರ್ಥ್ಯಕ್ಕೆ ವಿಸ್ತರಣೆಗೊಂಡಿದೆ. ಪ್ರಸೂತಿ ವಿಭಾಗವು 55 ಹಾಸಿಗೆ ಸಾಮರ್ಥ್ಯ ಹೊಂದಿದ್ದು, ಗ್ರಾಮೀಣ ಭಾಗದಲ್ಲಿ 06 ಉಪಕೇಂದ್ರಗಳು ಕಾರ್ಯನಿರ್ವಹಿಸುತ್ತವೆ.
ಸಾರ್ವಜನಿಕ ಆಸ್ಪತ್ರೆ (ಸವದತ್ತಿ): ಆಸ್ಪತ್ರೆಯು 1875 ರಲ್ಲಿ ಪ್ರಾರಂಭಗೊಂಡು 1958 ರಿಂದ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಸ್ಪತ್ರೆಯು 10 ವಿಶೇಷ ಕ್ಷಯರೋಗ ರೋಗಿಗಳಿಗೆ ಹಾಸಿಗೆ ಸೌಲಭ್ಯದೊಂದಿಗೆ ಒಟ್ಟಾರೆ 50 ಹಾಸಿಗೆ ಸೌಲಭ್ಯವನ್ನು ಹೊಂದಿದೆ.
ಸಾರ್ವಜನಿಕ ಆಸ್ಪತ್ರೆ (ಚಿಕ್ಕೋಡಿ): ಸಾರ್ವಜನಿಕ ಆಸ್ಪತ್ರೆಯು 1882 ರಲ್ಲಿ ಸ್ಥಳೀಯ ಮಂಡಳಿಯಿಂದ ಬಾಡಿಗೆ ಕಟ್ಟಡದಲ್ಲಿ ಆರಂಭಿಗೊಂಡು ಪ್ರಸ್ತುತ 50 ಹಾಸಿಗೆಯ ಸೌಲಭ್ಯದೊಂದಿಗೆ ಆಧುನೀಕರಣಗೊಂಡಿದೆ.
ಜಿಲ್ಲಾ ಕ್ಷಯರೋಗ ಕೇಂದ್ರ ಬೆಳಗಾವಿ:ಜಿಲ್ಲಾ ಕ್ಷಯರೋಗ ಕೇಂದ್ರವು 1972 ರಲ್ಲಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆರಂಭಗೊಂಡಿದ್ದು, ಪ್ರಯೋಗಾಲಯ ಹಾಗೂ ಎಕ್ಸರೇ ಘಟಕಗಳ ಸೌಲಭ್ಯವನ್ನು ಹೊಂದಿದೆ.
ಮಹಾತ್ಮಾಗಾಂಧಿ ಆಸ್ಪತ್ರೆ (ನಿಪ್ಪಾಣಿ-ಚಿಕ್ಕೋಡಿ): ಮಹಾತ್ಮಾಗಾಂಧಿ ಆಸ್ಪತ್ರೆಯು 1958ರಲ್ಲಿ ಪ್ರಾರಂಭಗೊಂಡಿದ್ದು, 10 ಹಾಸಿಗೆಯ ಸೌಲಭ್ಯವನ್ನು ಹೊಂದಿದೆ. ಇದರಲ್ಲಿ 04 ಹಾಸಿಗೆಯನ್ನು ಪ್ರಸೂತಿ ವಿಭಾಗಕ್ಕೆ ಮೀಸಲಿಡಲಾಗಿದೆ. ಇದನ್ನು ನಗರ ಕುಟುಂಬ ಆರೋಗ್ಯ ಕೇಂದ್ರಕ್ಕೆ ಸಂಯೋಜಿಸಲಾಗಿದೆ.
ನೌಕರರ ರಾಜ್ಯ ವಿಮಾ ಆಸ್ಪತ್ರೆ (ಬೆಳಗಾವಿ): ನೌಕರರ ರಾಜ್ಯ ವಿಮಾ ಕಾಯ್ದೆ 1948 ರನ್ವಯ ಬೆಳಗಾವಿ ಮಹಾನಗರ ಸಭೆ ವ್ಯಾಪ್ತಿಯಲ್ಲಿ ಆಸ್ಪತ್ರೆಯು 1963 ರಲ್ಲಿ ಸ್ಥಾಪನೆಗೊಂಡಿದೆ. ಬೆಳಗಾವಿಯಲ್ಲಿ 04 ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಆಸ್ಪತ್ರೆಗಳನ್ನು ಹೊಂದಿದೆ. ಈ ಆಸ್ಪತ್ರೆಯ ಆಧುನಿಕ ಸೌಲಭ್ಯವನ್ನು ಒಳಗೊಂಡಿದೆ.
ವ್ಯಾಕ್ಸಿನ್ ಸಂಸ್ಥ ಬೆಳಗಾವಿ: ವ್ಯಾಕ್ಸಿನ್ ಸಂಸ್ಥೆಯು 1904ರಲ್ಲಿ ವಿಶೇಷವಾಗಿ ಸಿಡುಬು ರೋಗ ಲಸಿಕೆ ತಯಾರಿಸುವ ನಿಟ್ಟಿನಲ್ಲಿ ಮುಂಬಯಿ ಪ್ರಾಂತ್ಯದಲ್ಲಿ ಆರಂಭಗೊಂಡಿದ್ದು, ಸಂಸ್ಥೆಯು 1909 ರಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. 1954 ರಲ್ಲಿ ಹಸು ಕರುವಿನ ಲಸಿಕೆಯಿಂದ ಕುರಿ ಲಸಿಕೆ ತಯಾರಿಸಲು ಬದಲಾವಣೆಗೊಂಡಿದೆ. 1956 ರಲ್ಲಿ ಆಡಳಿತವು ಕರ್ನಾಟಕ ಸರ್ಕಾರದ ಸುಪರ್ದಿಗೆ ವರ್ಗಾವಣೆಗೊಂಡಿದೆ.
ಮಿಷನ್ ಆಸ್ಪತ್ರೆ (ಸಂಕೇಶ್ವರ): ಮಿಷನ್ ಆಸ್ಪತ್ರೆಯು 1923 ರಲ್ಲಿ ಡಾ|| ಜಿ.ಹೆಂಡರಸನ್ ರವರಿಂದ ನಿರ್ಮಾಣಗೊಂಡಿರುತ್ತದೆ. ಆಸ್ಪತ್ರೆಯು ಎಕ್ಸರೇ ಘಟಕ, ಪ್ರಯೋಗಾಲಯ, ,ಶಸ್ತ್ರ ಚಿಕಿತ್ಸಾ ವಿಭಾಗ ಹಾಗೂ ಪ್ರಸೂತಿ ವಿಭಾಗವನ್ನು ಹೊಂದಿದೆ. ಪ್ರಸ್ತುತ ಆಸ್ಪತ್ರೆಯು 50 ಹಾಸಿಗೆ ಸೌಲಭ್ಯವನ್ನು ರೋಗಿಗಳಿಗೆ ಒದಗಿಸುತ್ತಿದೆ ಅಲ್ಲದೇ 10 ಹಾಸಿಗೆಯ ಕ್ಷಯರೋಗ ವಿಭಾಗವನ್ನು ಹೊಂದಿದೆ.
ಕುಷ್ಠ ರೋಗ ಆಸ್ಪತ್ರೆ ಹಿಂಡಲಗಾ (ಬೆಳಗಾವಿ): ಕುಷ್ಠರೋಗ ಆಸ್ಪತ್ರೆಯು 1912 ರಲ್ಲಿ ಡಾ|| ಇ.ವಿ.ಹಂಟರ ರವರಿಂದ ಆರಂಭಗೊಂಡು 1924 ರಿಂದ ಕುಷ್ಠರೋಗಿಗಳಿಗೆ ವಿಶೇಷ ಉಪಚಾರ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇವುಗಳಲ್ಲದೆ ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆರ್ಯುವೇದಿಕ, ಹೋಮಿಯೋಪಥಿಕ, ಆಸ್ಪತ್ರೆಗಳನ್ನು ಹೊಂದಿದ್ದು, ಉತ್ತಮ ದರ್ಜೆಯ ಆರೋಗ್ಯ ಸೌಲಭ್ಯಗಳನ್ನು ಬೆಳಗಾವಿಯ ಸುತ್ತಮುತ್ತಲಿನ ಜನತೆಗೆ ಒದಗಿಸುತ್ತಿವೆ.