ಕಲೆ / ವಿಜ್ಞಾನ / ವಾಣಿಜ್ಯ ಕಾಲೇಜುಗಳು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ
ವಿದ್ಯಾ ಸಂಗಮ,
ಪಿ.ಬಿ.ಆರ್.ಎಚ್.-4
ಬೆಳಗಾವಿ- 591156
ವೆಬ್ಸೈಟ್ : http://www[dot]rcub[dot]ac[dot]in/
ಕೇ.ಏಲ್.ಇ ಸಂಸ್ಥೆಯ ಬಸವಪ್ರಭು ಕೋರೆ ಆರ್ಟ್ಸ್, ಸೈನ್ಸ್ & ವಾಣಿಜ್ಯೆ ಪ್ರೀ-ಯೂನಿವರ್ಸಿಟಿ ಕಾಲೇಜ್ (ಚಿಕ್ಕೋಡಿ)
ಈ ಕಾಲೇಜು ಕೆ.ಎಲ್. ಇ ಸಂಸ್ಥೆಯು ಇತರೆ ಪ್ರಿ-ಯುನಿವರ್ಸಿಟಿ ಕಾಲೇಜ್‍ಗಳಲ್ಲಿ ಒಂದಾದ ಹಾಗೂ ಪ್ರಸಿದ್ಧಿಯಾದ ಮಹಾವಿದ್ಯಾಲಯ ಇದಾಗಿದೆ. ಇದು ಚಿಕ್ಕೊಡಿಯಲ್ಲಿದ್ದು, ಈ ಮಹಾವಿದ್ಯಾಲಯದಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಪಿ.ಯು.ಸಿ. ಮಾಡಬಹುದಾಗಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯ ನಂತರ ಈ ಮಹಾವಿದ್ಯಾಲಯ ಸೇರುವ ಅವಕಾಶವಿದ್ದು, ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದ ಮಹಾವಿದ್ಯಾಲಯವಾಗಿದೆ.
ಈ ಕಾಲೇಜಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅನುಭವಿಕ ಬೋಧಕವರ್ಗವಿದ್ದು, ಒಳ್ಳೆಯ ಗ್ರಂಥಾಲಯ ವ್ಯವಸ್ಥೆ ಕೂಡ ಇದೆ. ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್. & ಎನ್.ಸಿ.ಸಿ. ತರಬೇತಿಯನ್ನು ಸಹ ನಿಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪ್ರಾಂಶುಪಾಲರು, ಬಸವಪ್ರಭು ಕೋರೆ ಪ್ರಿ ಯುನಿವರ್ಸಿಟಿ ಕಾಲೇಜು
ಚಿಕ್ಕೋಡಿ – 591201, ಕರ್ನಾಟಕ
Tel : 091 – 8338 – 274856.
ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮನಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ, ಬೆಳಗಾವಿ.
ಕೆ.ಎಲ್.ಇ ಸಂಸ್ಥೆಯು 1958 ರಲ್ಲಿ ಸ್ಥಾಪಿತವಾದ ಸಂಸ್ಥೆಯಾಗಿದ್ದು, ರಾಜಾ ಲಖಮನಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯವು ಸಂಸ್ಥೆಯ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಒಂದಾಗಿದೆ. ಸಂಸ್ಥೆಯನ್ನು ಬೆಳಗಾವಿಯಲ್ಲಿ ದಿ. ಸರ್ದಾರ್ ರಾಜಾ ಲಖಮನಗೌಡ ಬಸವಪ್ರಭು ಸರದೇಸಾಯಿ ಇವರ ಸ್ಮರಣಾರ್ಥ ಅವರ ಹೆಸರಿನಲ್ಲಿ ಸ್ತಾಪಿಸಲಾಗಿದ್ದು, ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯತೆ ಹೊಂದಿರುತ್ತದೆ. ಇತ್ತೀಚಿಗೆ ಪದವಿ ವಿಧ್ಯಾರ್ಥಿಗಳಿಗೆ ಅನುಕೂಲತೆ ಒದಗಿಸಲು ಈ ಸಂಸ್ಥೆಯಲ್ಲಿ ಬಿಸಿಎ ಕೋರ್ಸನ್ನು ಪ್ರಾರಂಭಿಸಲಾಗಿದೆ. ಈ ಮಹಾವಿದ್ಯಾಲಯವು ವಿಜ್ಞಾನ ಶಿಕ್ಷಣ ಕಾಲೇಜು ಅಭಿವೃದ್ದಿ ಕಾರ್ಯಕ್ರಮದಡಿ ಆಯ್ಕೆಯಾಗಿರುತ್ತದೆ.
ಈ ಸಂಸ್ಥೆಯು ಕರ್ನಾಟಕ ಸಕಾರದ ಕೆ.ಎಸ್.ಇ.ಇ. ಮಾನ್ಯತೆ ಹೊಂದಿದ್ದು, ವಿಧ್ಯಾರ್ಥಿಗಳಲ್ಲಿನ ಕೌಶಲ್ಯ ಅಭಿವೃದ್ದಿಗೆ ಪೂರಕವಾಗುವ ಪದವಿ ಪೂರ್ವ ಹಾಗೂ ಪದವಿ ಕೋರ್ಸಗಳನ್ನು ನಡೆಸುತ್ತದೆ. ಉತ್ತಮ ಗುಣಮಟ್ಟದ, 26000 ಕ್ಕಿಂತೆ ಹೆಚ್ಚು ಪುಸ್ತಕಗಳನ್ನು ಹೊಂದಿದ ಗ್ರಂಥಾಲಯವನ್ನು ಹೊಂದಿದ್ದು, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ರಾಜಾ ಲಖಮನಗೌಡ ವಿಜ್ಞಾನ ಸಂಸ್ಥೆ,
ಬೆಳಗಾವಿ-590010, ಕರ್ನಾಟಕ
0831-2402351, 2461928
ಗೋಗಟೆ ಕಾಲೇಜ್ ಆಫ್ ಕಾಮರ್ಸ್ (ಬೆಳಗಾವಿ)
ಉತ್ತರ ಕರ್ನಾಟಕ ಭಾಗದಲ್ಲಿ ವಾಣಿಜ್ಯ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಹಾಗೂ ಕೌಶಲ್ಯಯುತ ಶಿಕ್ಷಣ ಒದಗಿಸುವ ಸಂಸ್ಥೆಗಳಲ್ಲಿ ಗೋಗಟೆ ವಾಣಿಜ್ಯ ಮಹಾವಿದ್ಯಾಲಯವು ಒಂದಾಗಿದೆ. 2001 ರಲ್ಲಿ ಸಂಸ್ಥೆಯನ್ನು ಗೋಗಟೆ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯ ಎಂದು ಮರು ನಾಮಕರಣ ಮಾಡಲಾಗಿದೆ. ಸಂಸ್ಥೆಯು ಕಳೆದ 50 ವರ್ಷಗಳಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಮಹತ್ತರವಾದ ಹುದ್ದೆಗಳನ್ನು ಹೊಂದಲು ಸಮರ್ಥರಾದ ಹಲವಾರು ವಿಧ್ಯಾರ್ಥಿಗಳನ್ನು ಕೊಟ್ಟಿರುತ್ತದೆ.
ಸಂಸ್ಥೆಯು 10000 ಕ್ಕೂ ಹೆಚ್ಚನ ವಿಧ್ಯಾರ್ಥಿಗಳನ್ನು ಹೊಂದಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಾನ್ಯತೆ ಪಡೆದಿರುತ್ತದೆ. ಬೆಳಗಾವಿಯ ಟಿಳಕವಾಡಿ ಪ್ರದೇಶದಲ್ಲಿ ಸಕಲ ಸೌಲಭ್ಯಗಳನ್ನು ಹೊಂದಿದ ಉತ್ತಮವಾದ ಕ್ಯಾಂಪಸ್ ಹೊಂದಿರುತ್ತದೆ. ಉತ್ತಮವಾದ ಗ್ರಂಥಾಲಯ ಸೌಲಭ್ಯ ಹಾಗೂ ಇತರ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಹೊಂದಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಗೋಗಟೆ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯ,
ಓಳಕವಾಡಿ ಬೆಳಗಾವಿ-590006, ಕರ್ನಾಟಕ
0831-2482987
ಕೆ.ಎಲ್.ಇ. ಸಂಸ್ಥೆಯ ಜಿ.ಐ. ಬಾಗೇವಾಡಿ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ನಿಪ್ಪಾಣಿ
ಈ ಮಹಾವಿದ್ಯಾಲಯವನ್ನು ಮಹಾದಾನಿಗಳಾದ ಶ್ರೀ ಗಣಪತಿ ಈಶ್ವರಪ್ಪ ಬಾಗೇವಾಡಿ ಇವರ ಹೆಸರಿನಲ್ಲಿ ಸ್ಥಾಪಿಸಲಾಗಿದ್ದು, ಪದವಿ ಪೂರ್ವ ಶೀಕ್ಷಣ ಇಲಾಖೆಯ ಅನುಮೋದಿತ ಸಂಸ್ಥೆಯಾಗಿದೆ. ಮಹಾವಿದ್ಯಾಲಯವು ಕಲಾ ವಾಣಿಜ್ಯ ಹಾಗೂ ವಿಜ್ಞಾನ ವಿಷಯಗಳಲ್ಲಿ ಪದವಿ ಶಿಕ್ಷಣ ನೀಡುತ್ತಲಿದೆ. ಉತ್ತಮವಾದ ಪರಿಸರ ಹಾಗೂ ಸೌಲಭ್ಯಗಳನ್ನು ಹೊಂದಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪ್ರಾಚಾರ್ಯರರು, ಜಿ.ಐ.ಬಾಗೇವಾಡಿ ಕಾಲೇಜು
ನಿಪ್ಪಾಣಿ : 591237, ಕರ್ನಾಟಕ
Tel : 091 – 8338 – 221423.
ಕೆ.ಎಲ್.ಇ. ಸಂಸ್ಥೆಯ ಎಸ್.ಎಂ.ಎಸ್. ಕಲಾ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ, ಅಥಣಿ
ಈ ಮಹಾವಿದ್ಯಾಲಯವನ್ನು ಅಥಣಿಯಲ್ಲಿ ಸ್ಥಾಪಿಸಲಾಗಿದ್ದು, ಪದವಿ ಪೂರ್ವ ಶೀಕ್ಷಣ ಇಲಾಖೆಯ ಅನುಮೋದಿತ ಸಂಸ್ಥೆಯಾಗಿದೆ. ಮಹಾವಿದ್ಯಾಲಯವು ಕಲಾ ವಾಣಿಜ್ಯ ಹಾಗೂ ವಿಜ್ಞಾನ ವಿಷಯಗಳಲ್ಲಿ ಪದವಿ ಪೂರ್ವ ಶಿಕ್ಷಣ ನೀಡುತ್ತಲಿದೆ. ಉತ್ತಮವಾದ ಪರಿಸರ ಹಾಗೂ ಸೌಲಭ್ಯಗಳನ್ನು ಹೊಂದಿರುತ್ತದೆ..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪ್ರಾಚಾರ್ಯರರು, ಎಸ್.ಎಂ.ಎಸ್. ಕಾಲೇಜು
ಅಥಣಿ : 591304, ಕರ್ನಾಟಕ
08289-251173
ಕೆ.ಎಲ್.ಇ. ಸಂಸ್ಥೆಯ ಜಿ.ಎ. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಬೆಳಗಾವಿ
ಈ ಸಂಸ್ಥೆಯನ್ನು 1916 ರಲ್ಲಿ ಆಂಗ್ಲೋ ವರ್ನಾಕುಲರ್ ಶಾಲೆಯನ್ನಾಗಿ ಪ್ರಾರಂಭಿಸಲಾಗಿದ್ದು, ನಂತರದಲ್ಲಿ 1972 ರಲ್ಲಿ ಗಿಲಗಂಚಿ ಅರಟಾಲ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಎಂದು ಉನ್ನತೀಕರಿಸಲಾಗಿದೆ. ಪದವಿ ಪೂರ್ವ ಶೀಕ್ಷಣ ಇಲಾಖೆಯ ಅನುಮೋದಿತ ಸಂಸ್ಥೆಯಾಗಿದೆ. ಮಹಾವಿದ್ಯಾಲಯವು ಕಲಾ ವಾಣಿಜ್ಯ ಹಾಗೂ ವಿಜ್ಞಾನ ವಿಷಯಗಳಲ್ಲಿ ಪದವಿ ಪೂರ್ವ ಶಿಕ್ಷಣ ನೀಡುತ್ತಲಿದೆ. ಉತ್ತಮವಾದ ಪರಿಸರ ಹಾಗೂ ಸೌಲಭ್ಯಗಳನ್ನು ಹೊಂದಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪ್ರಾಚಾರ್ಯರರು, ಜಿ.ಎ.ಸಂಯುಕ್ತ ಪದವಿ ಪೂರ್ವ ಕಾಲೇಜು
ಬೆಳಗಾವಿ : 590010, ಕರ್ನಾಟಕ
ದೂ.ಸಂ :0831-2420063