ಶಿಕ್ಷಣ
ಶಿಕ್ಷಣ ಇದು ಮನುಷ್ಯನ ವೃತ್ತಿ ಬದುಕಿಗೆ ಭದ್ರ ಬುನಾದಿಯಾಗಿದೆ. ಶಿಕ್ಷಣವನ್ನು ಜಗತ್ತಿನ ಸಂಪತ್ತು ಎಂದು ಹೇಳಲಾಗಿದೆ. ಜಾನ್ ಲುಬಾಕ್ ಅವರ ಪ್ರಕಾರ “ ಪ್ರತಿಯೊಬ್ಬ ವಿದ್ಯಾರ್ಥಿ ಕಲಿಯಬೇಕು ಎನ್ನುವುದಕ್ಕಿಂತ ಪ್ರತಿಯೊಬ್ಬ ವಿದ್ಯಾರ್ಥಿ ಕಲಿಯಲು ಬಯಸುವಂತಾಗಬೇಕು ಎಂಬುದು ಮುಖ್ಯ “ ಬೆಳಗಾವಿಯಲ್ಲಿನ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅವರವರ ಕುಶಲತೆಗೆ ತಕ್ಕಂತೆ ಉಜ್ವಲ ಭವಿಷ್ಯದ ಅವಕಾಶವನ್ನು ಕಲ್ಪಿಸುತ್ತವೆ. ಬೆಳಗಾವಿಯಲ್ಲಿನ ಶಿಕ್ಷಣ ಸಂಸ್ಥೆಗಳು, ಕರ್ನಾಟಕದಲ್ಲಿನ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿವೆ.
ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಾದ ಕೆ.ಎಲ್.ಇ, ಸೊಸೈಟಿ, ಸೌಥ್ ಕೊಂಕಣ ಸೊಸೈಟಿ, ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜ್, ಕೆ.ಎಲ್.ಎಸ್ ಸೊಸೈಟಿ, ಮುಂತಾದವುಗಳ ಜೊತೆಗೆ. ಬೆಳಗಾವಿಯಲ್ಲಿ ವೈದ್ಯಕೀಯ, ತಾಂತ್ರಿಕ, ವ್ಯವಸ್ಥಾಪನೆ ಹಾಗೂ ಸಂಬಂಧಿಸಿದ ಇನ್ನಿತರ ಶಾಲಾ ಕಾಲೇಜುಗಳು ಲಭ್ಯವಿರುತ್ತವೆ.