Close

ಗೋಕಾಕ ಜಲಪಾತ

ಫೋಟೋ ಗ್ಯಾಲರಿ

  • ಗೋಕಾಕ ಜಲಪಾತ ಗೋಕಾಕ
    ಗೋಕಾಕ ಜಲಪಾತ
  • ಗೋಕಾಕ ಜಲಪಾತ ಗೋಕಾಕ
    ಗೋಕಾಕ ಜಲಪಾತ

ಗೋಕಾಕ ಜಲಪಾತ ಇದು ಬೆಳಗಾವಿಯಿಂದ 60 ಕೀಮೀ. ದೂರದಲ್ಲಿದ್ದು, ಗೋಕಾಕ ನಗರದಿಂದ 10 ಕೀ.ಮೀ. ಅಂತರದಲ್ಲಿದೆ. ಇದು ಮುಖ್ಯ ರಸ್ತೆಯಲ್ಲಿಯೇ ಇದ್ದು, ಇದರ ಸೊಬಗು ನೋಡುಗರಿಗೆ ಜಿಲ್ಲೆಯ ಒಂದು ಪ್ರವಾಸಿ ಕೇಂದ್ರವಾಗಿ ಆಕರ್ಷಿತಗೊಂಡಿದೆ. ಈ ಜಲಪಾತ 170 ಅಡಿ ಎತ್ತರದಿಂದ ಧುಮುಕುತ್ತದೆ. ಘಟಪ್ರಭಾ ನದಿಯಿಂದ ಅಂಕುಡೊಂಕಾದ ದಾರಿಯಲ್ಲಿ 52 ಕೀ.ಮೀ. ನಷ್ಟು ಹರಿದರೆ, 170 ಅಡಿ ಕೆಳಗೆ ನೀರು ಧುಮುಕುತ್ತದೆ. ಈ ಜಲಪಾತ ತನ್ನ ಆಕಾರ ಹಾಗೂ ಹರಿಯುವ ನೀರಿಗೆ ತುಂಬಾ ಪ್ರಸಿದ್ಧಿ ಹೊಂದಿದೆ. ಇಲ್ಲಿನ ಸೊಬಗು ಕವಿತೆ ಬರೆಯಲಿಕ್ಕೆ ಪ್ರೇರಣೆ ನೀಡುವಂತಿದೆ. ಜೂನ್ – ಸೆಪ್ಟೆಂಬರ ನಲ್ಲಿ ಗೋಕಾಕ್ ಜಲಪಾತ ಧುಮುಕುವುದರಿಂದ ಈ ಅವಧಿಯಲ್ಲಿಯೇ ನೋಡಬಹುದಾಗಿದೆ. 1887 ರಲ್ಲಿ ದೇಶದಲ್ಲಿಯೇ ಪ್ರಪ್ರಥಮವಾಗಿ ಈ ಜಲಪಾತಲದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಯಿತು.

ತಲುಪುವ ಬಗೆ :

ವಿಮಾನದಲ್ಲಿ

ಸಮೀಪದ ವಿಮಾನ ನಿಲ್ದಾಣ 60 ಕಿ.ಮೀ. ಸಾಂಬ್ರಾ ವಿಮಾನ ನಿಲ್ದಾಣ

ರೈಲಿನಿಂದ

ಗೋಕಾಕ ರಸ್ತೆ ರೈಲು ನಿಲ್ದಾಣ - 5 ಕಿ.ಮೀ

ರಸ್ತೆ ಮೂಲಕ

ಗೋಕಾಕ - 5 ಕಿ.ಮೀ