Close

ಇತರೆ

ಇತರ ಕಾಲೇಜುಗಳು

 

ಕೆ.ಎಲ್.ಇ. ಸಂಸ್ಥೆಯ ಬಿ.ವಿ.ಬೆಲ್ಲದ ಲಾ ಕಾಲೇಜು (ಬೆಳಗಾವಿ)

ಬೆಲ್ಲದ ಕಾನೂನು ಮಹಾವಿದ್ಯಾಲಯ ಬೆಳಗಾವಿ

ಈ ಕಾಲೇಜು 1975 ರಲ್ಲಿ ಪ್ರಾರಂಭವಾಗಿದೆ. ಅಲ್ಲದೇ ಸಂಜೆ ಹೊತ್ತಿನ ಕೆ.ಎಲ್.ಇ. ಸಂಸ್ಥೆಯ ಲಾ ಕಾಲೇಜು ಕೂಡ ಇದೇ ವರ್ಷ ಸ್ಥಾಪನೆಯಾಗಿದೆ. 2000-2001 ರಲ್ಲಿ ಕರ್ನಾಟಕ ಸರ್ಕಾರ ಹಾಗೂ ಬಾರ್ ಕೌನ್ಸಿಲ್ ಆಫ್ ಇಂಡಿಯಾ , ಧಾರವಾಡ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಈ ಮಹಾವಿದ್ಯಾಲಯದಲ್ಲಿ 5 ವರ್ಷ ಅವಧಿಯ ಕಾನೂನು ಕೋರ್ಸ್‍ನ್ನು ಪ್ರಾರಂಭಿಸಲು ಅನುಮತಿ ದೊರೆಯಿತು. ಈ ಪೀಠದಲ್ಲಿ ಉನ್ನತ ಮಟ್ಟದ ಬೋದನೆ ಹಾಗೂ ಇಂಥ ವಿದ್ಯಾರ್ಥಿಗಳು ಉನ್ನತ ಶ್ರೇಣಿ ಮತ್ತು ಮೆಡಲ್ ಪಡೆದುಕೊಂಡಿರುವುದರಿಂದ ಈ ಮಹಾವಿದ್ಯಾಲಯಕ್ಕೆ ಒಳ್ಳೆಯ ಹೆಸರು ದೊರೆದಂತಾಗಿದೆ. ಈ ಕಾಲೇಜನಲ್ಲಿ ಎಲ್.ಎಲ್.ಬಿ – 3 ವರ್ಷ, ಎಲ್.ಎಲ್.ಬಿ – 5 ವರ್ಷದ ಕೋರ್ಸುಗಳಿಗೆ ಅವಕಾಶ ಇದೆ. ಅಲ್ಲದೆ ಇಲ್ಲಿ ಪ್ರತ್ಯೇಕವಾದ ಹಾಸ್ಟೆಲ್ ಹಾಗೂ ಸುಸಜ್ಜಿತ ಗ್ರಂಥಾಲಯ ಮತ್ತು ವಿದ್ಯಾರ್ಥಿ ವೇತನದ ಅವಕಾಶಗಳು ಇಲ್ಲಿ ದೊರೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಬಿ.ವಿ.ಬೆಲ್ಲದ ಲಾ ಕಾಲೇಜು
ಬೆಳಗಾವಿ, ಕರ್ನಾಟಕ 
ದೂ.ಸಂ-0831-2423734

ಕೆ.ಎಲ್.ಇ. ಸಂಸ್ಥೆಯ ಕಾಲೇಜ್ ಆಫ್ ಫಾರ್ಮಸಿ (ನಿಪ್ಪಾಣಿ)

ಕೆ ಎಲ್ ಇ ಫಾರ್ಮಸಿ ನಿಪ್ಪಾಣಿ

ಈ ಕಾಲೇಜನಲ್ಲಿ ಡಿ.ಫಾರ್ಮ್ ವ್ಯಾಸಂಗವನ್ನು ಮಾಡಲಾಗುತ್ತದೆ. ಇಲ್ಲಿ ಹುಡುಗರು ಹಾಗೂ ಹುಡುಗಿಯರಿಗೆ ಪ್ರತ್ಯೇಕವಾದ ಹಾಸ್ಟೆಲ್ ವ್ಯವಸ್ಥೆ ಇದೆ. ಕಾಲೇಜಿನ ಗ್ರಂಥಾಲಯ ಕಟ್ಟಡ ಕೂಡ 2000 ಚ.ಅ. ಸುಸಜ್ಜಿತವಾದ, ವಿಶಾಲವಾದ ಕೊಠಡಿಗಳು ಹಾಗೂ ಪುಸ್ತಕಗಳನ್ನು ಹೊಂದಿದೆ.

ಸಿಂಡಿಕೇಟ್ ಬ್ಯಾಂಕ್, ಪೋಸ್ಟ್ ಹಾಗೂ ಟೆಲಿಗ್ರಾಫ್ ಆಫೀಸ್‍ಗಳು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನಲ್ಲಿ ಬ್ಯಾಂಕಿನೊಂದಿಗೆ ಹಾಗೂ ಇತರೆ ಸಂಪರ್ಕದ ಅವಶ್ಯಕತೆ ಪೂರೈಸಲು ಸಹಾಯ ಮಾಡುತ್ತವೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಶ್ರೀ ಜೆ.ಕೆ. ಸಾಬುಜಿ, ಪ್ರಿನ್ಸಿಪಾಲ್
ಕೆ.ಎಲ್.ಇ. ಸೊಐಟಿ ಕಾಲೇಜ ಆಪ್ ಫಾರ್ಮಸಿ
ಜಿ.ಐ. ಬಾಗೇವಾಡಿ ಕಾಲೇಜ್ ಕ್ಯಾಂಪಸ್
ನಿಪ್ಪಾಣಿ – ಕರ್ನಾಟಕ
ದೂ. ಸಂ: 08338-224133

ಸ್ಕೂಲ್ ಆಫ್ ಫಾರ್ಮಸಿ:
        ಈ ಸ್ಕೂಲ್ 1968 ರಲ್ಲಿ ಸ್ಥಾಪನೆಯಾಗಿ , ಕೆ.ಎಲ್. ಇ. ಸೊಸೈಟಿ ವತಿಯಿಂದ ಇಲ್ಲಿ ಡಿ.ಫಾರ್ಮ್ ಕೋರ್ಸ್ ಅನ್ನು 1975 ರಲ್ಲಿ ಸ್ಥಾಪನೆಯಾಯಿತು. ಅಲ್ಲದೆ ಈ ಕೋರ್ಸ್ ಅನ್ನು ಬೆಳಗಾವಿ ಗವರ್ನಮೆಂಟ್ ಪಾಲಿಟೆಕ್ನಿಕ್ ನಲ್ಲಿಯೂ ಸಹಿತ ಪ್ರಾರಂಭಿಸಲಾಯಿತು. 
ಈ ಪಾಲಿಟೆಕ್ನಿಕ ಕಾಲೇಜು 1958 ರಲ್ಲಿ ಸ್ಥಾಪನೆಯಾಗಿ, ಇಲ್ಲಿ ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಇಂಜಿನಿಯರಿಂಗ್ ಹಾಗೂ ಕಮರ್ಷಿಯಲ್ ಪ್ರ್ಯಾಕ್ಟಿಸ್ ನಂತಹ ತಲಾ 3 ವರ್ಷದ ಕೋರ್ಸ್ ಅನ್ನು ಇಲ್ಲಿ ಪ್ರಾರಂಭಿಸಲಾಯಿತು.

ಕೆ.ಎಲ್.ಇ. ಸಂಸ್ಥೆಯ ಪ್ರಿ-ಯುನಿವರ್ಸಿಟಿ ಕಾಲೇಜು (ಗೋಕಾಕ)

        ಕೆ.ಎಲ್.ಇ. ಸೊಸೈಟಿಯ ಪ್ರಿ ಯುನಿವರ್ಸಿಟಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನದ ಪಿ.ಯು. ಕಾಲೇಜನ್ನು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರ ಮಾನ್ಯತೆಗೆ ಒಳಪಟ್ಟು ಪ್ರಾರಂಭಿಸಲಾಯಿತು. ಈ ಕಾಲೇಜ್‍ನಲ್ಲಿ ವಿದ್ಯಾರ್ಥಿ ವೇತನದ ವ್ಯವಸ್ಥೆಯ ಜೊತೆಗೆ, ಗ್ರಂಥಾಲಯ ಹಾಗೂ ಸ್ಪೋರ್ಟ್ಸ ಕ್ಲಬ್ ಕೂಡ ಇದೆ.

ಕಾಡಸಿದ್ದೇಶ್ವರ ಕಂಪೋಸಿಟ್ ಪ್ರಿ-ಯುನಿವರ್ಸಿಟಿ ಮಹಾವಿದ್ಯಾಲಯ (ಸವದತ್ತಿ ) : 
        ಸವದತ್ತಿ, ಬೆಳಗಾವಿಯಲ್ಲಿ ಈ ಮಹಾವಿದ್ಯಾಲಯ ಇದ್ದು. ಇಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕ್ಷೇತ್ರದಲ್ಲಿನ ಪಿ.ಯು. ಪಠ್ಯಕ್ರಮ ವ್ಯವಸ್ಥೆಯನ್ನು ಹೊಂದಿದೆ. ಈ ಕಾಲೇಜು ಕರ್ನಾಟಕ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯಿಂದ ಅನುಮೋದಿಸಲ್ಪಟ್ಟಿದೆ. ಸುಸಜ್ಜಿತ ಗ್ರಂಥಾಲಯ ವ್ಯವಸ್ಥೆ, ಆಟದ ಮೈದಾನ, ಗಾರ್ಡನ್, ವ್ಯವಸ್ಥೆಯ ಜೊತೆಗೆ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್. ತರಬೇತಿಯನ್ನು ಸಹ ನೀಡಲಾಗುತ್ತದೆ.

ಕೆ.ಎಲ್.ಇ. ಸೊಸೈಟಿಯ ಸಿ.ಬಿ.ಕೋರೆ ಪಾಲಿಟೆಕ್ನಿಕ್ (ಚಿಕ್ಕೋಡಿ)

ಸಿ ಬಿ ಕೋರೆ ಪಾಲಿಟೆಕ್ನಿಕ್ ಚಿಕ್ಕೋಡಿ

ಈ ಮಹಾವಿದ್ಯಾಲಯವನ್ನು 1984 ರಲ್ಲಿ ಶ್ರೀ ವಿರೇಂದ್ರ ಪಾಟೀಲ್, ಮಾಜಿ ಮುಖ್ಯಮಂತ್ರಿಗಳು, ಕರ್ನಾಟಕ ಇವರಿಂದ ಉದ್ಘಾಟಿಸಿ, ಪ್ರಾರಂಭಿಸಲ್ಪಟ್ಟಿದೆ. ಈ ಪಾಲಿಟೆಕ್ನಿಕ್ ಮಹಾವಿದ್ಯಾಲಯವು ಎ.ಐ.ಸಿ.ಟಿ.ಇ, ನವದೆಹಲಿ ಹಾಗೂ ಡಿ.ಟಿ.ಇ, ಬೆಂಗಳೂರು ಇವರ ಮಾನ್ಯತೆ ಪಡೆದಿರುತ್ತದೆ. ಇಲ್ಲಿ ಡಿಪ್ಲೊಮಾ ಸಿವಿಲ್ ಇಂಜಿನಿಯರಿಂಗ್, ಡಿಪ್ಲೋಮಾ ಮೆಕ್ಯಾನಿಕಲ್ , ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್, ಆಟೋಮೊಬೈಲ್ ಇಂಜಿನಿಯರಿಂಗ್, ಇತರೆ ಡಿಪ್ಲೋಮಾ ಕೋರ್ಸ್‍ಗಳನ್ನು ಇಲ್ಲಿ ಕಲಿಯಲು ಅವಕಾಶವಿರುತ್ತದೆ. ಅಲ್ಲದೇ ಈ ಕಾಲೇಜನಲ್ಲಿ ಹಾಸ್ಟೆಲ್, ಆಟದ ಮೈದಾನ, ಕಾಲೇಜ್ ಬಸ್ಸು, ಕ್ಯಾಂಟಿನ್, ಇನ್ನಿತರೆ ಅವಶ್ಯಕವಾದ ಎಲ್ಲ ವ್ಯವಸ್ಥೆಗಳನ್ನು ಇಲ್ಲಿ ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – 08338-2720