ಬೆಳಗಾವಿ ಕೋಟೆ
ಈ ಕೋಟೆಯನ್ನು ಸ್ಥಳೀಯ ಆಳ್ವಿಕೆದಾರರಿಂದ 12 ನೇ ದಶಕದಲ್ಲಿ ಕಟ್ಟಲಾಗಿದ್ದು, ಹಂತ ಹಂತವಾಗಿ ಇದನ್ನು ಬೆಳಗಾವಿಯನ್ನು ಆಳುವ ಆಳ್ವಿಕೆದಾರರು ಅಭಿವೃದ್ಧಿ ಪಡಿಸಿದರು. ಈ ಕೋಟೆಯು ಮಸೀದಿ ಹಾಗೂ ಮಂದಿರ ಎರಡೂ ರೀತಿಯಲ್ಲಿ ಕಟ್ಟಿರುವಂತಹ ಕೋಟೆಯಾಗಿದೆ. ಈ ಕೋಟೆಯ ಮುಖ್ಯ ದ್ವಾರದಲ್ಲಿ ಗಣೇಶ ದೇವಸ್ಥಾನ ಹಾಗೂ ದುರ್ಗಾ ದೇವಸ್ಥಾನ ಇದ್ದು, ಸಫಾ ಮಸೀದಿ ಕೂಡ ಈ ಎರಡೂ ಮಸೀದಿಗಳಲ್ಲಿರುವ ಒಂದೂ ಮಸೀದಿಯಾಗಿತ್ತು. ಈ ಮಸೀದಿ ಬೆಳಗಾವಿಯಲ್ಲಿರುವ 25-30 ಮಸೀದಿಗಳಲ್ಲಿಯೇ ಸುಂದರವಾದ ಮಸೀದಿ ಈದಾಗಿದೆ. ಇಂಡೋ-ಸಾರ್ಸೆನಿಕ್ ಹಾಗೂ ಡೆಕ್ಕನ್ ಶೈಲಿಯಲ್ಲಿನ ಆರ್ಚ್ ಪಾಯಿಂಟ್, ಮಿನಾರ್ಸ್ ಗಳನ್ನು ಇಲ್ಲಿ ಕಾಣಬಹುದಾಗಿದೆ.
ತಲುಪುವ ಬಗೆ :
ವಿಮಾನದಲ್ಲಿ
ಸಮೀಪದ ವಿಮಾನ ನಿಲ್ದಾಣ ಸಾಂಬ್ರಾ (ಬೆಳಗಾವಿ) ವಿಮಾನ ನಿಲ್ದಾಣ - 8 ಕಿ.ಮೀ
ರೈಲಿನಿಂದ
ಸಮೀಪದ ರೈಲು ನಿಲ್ದಾಣ - ಬೆಳಗಾವಿ - 2 ಕಿ.ಮೀ
ರಸ್ತೆ ಮೂಲಕ
ಬೆಳಗಾವಿ - 1 ಕಿ.ಮೀ