Close

ಕಪಿಲೇಶ್ವರ ಮಂದಿರ

ಫೋಟೋ ಗ್ಯಾಲರಿ

  • ಕಪಿಲೇಶ್ವರ ಮಂದಿರ - ಬೆಳಗಾವಿ
    ಕಪಿಲೇಶ್ವರ ಮಂದಿರ

ಇದು ಬೆಳಗಾವಿಯಲ್ಲಿನ ಹಳೆಯ ದೇವಾಸ್ಥಾನಗಳಲ್ಲಿ ಇದು ಒಂದು. ಈ ದೇವಸ್ಥಾನವು ದಕ್ಷಿಣದ ಕಾಶಿ ಎಂದು ಹೆಸರುವಾಸಿಯಾಗಿದೆ. 12 ಜ್ಯೋತಿರ್ಲಿಂಗದ ದರ್ಶನದ ನಂತರ ಕಪಿಲೇಶ್ವರ ದೇವರ ದರ್ಶನ ಮಾಡದಿದ್ದರೆ ಯಾತ್ರೆ ಅಪೂರ್ಣವೆಂದು ಜನರ ನಂಬಿಕೆಯಾಗಿದೆ. ಶ್ರಾವಣ ಮಾಸದಲ್ಲಿ ಕಪಿಲೇಶ್ವರ ಮಂದಿರಕ್ಕೆ ಭೇಟಿ ಮಾಡಲೇಬೇಕಾಗಿದ್ದು, ಮಹಾಶಿವರಾತ್ರಿಯ ಸಮಯದಲ್ಲಿ ಇಲ್ಲಿ ಜನ ಬರುತ್ತಾರೆ. ಈ ಜೋತಿರ್ಲಿಂಗವು ಸ್ವಯಂ ಆಧಾರಿತವಾಗಿದೆ. ಇಲ್ಲಿನ ಗಣೇಶ, ಹನುಮಂತ, ದತ್ತ ಹಾಗೂ ಸಾಯಿಬಾಬ ದೇವಸ್ಥಾನಗಳು ಈ ದೇವಾಸ್ಥಾನದ ಸುತ್ತಲೂ ಇದೆ. ನವಗ್ರಹ ಮಂದಿರ ಕೂಡ ಈ ದೇವಸ್ಥಾನದಲ್ಲಿದೆ.

ತಲುಪುವ ಬಗೆ :

ವಿಮಾನದಲ್ಲಿ

ಸಮೀಪದ ವಿಮಾನ ನಿಲ್ದಾಣ ಸಾಂಬ್ರಾ (ಬೆಳಗಾವಿ) ವಿಮಾನ ನಿಲ್ದಾಣ - 10 ಕಿ.ಮೀ

ರೈಲಿನಿಂದ

ಸಮೀಪದ ರೈಲು ನಿಲ್ದಾಣ - ಬೆಳಗಾವಿ - 1 ಕಿ.ಮೀ

ರಸ್ತೆ ಮೂಲಕ

ಬೆಳಗಾವಿ - 2 ಕಿ.ಮೀ