ಕಮಲಬಸ್ತಿ
ಕೋಟೆಯಲ್ಲಿರುವ ಎರಡು ಬಸ್ತಿಗಳಲ್ಲಿ ಕಮಲಬಸ್ತಿ ಕೂಡ ಒಂದಾಗಿದೆ. ಇದನ್ನು 1204 ರಲ್ಲಿ ನಿರ್ಮಿಸಲಾಗಿದೆ. ಈ ಬಸ್ತಿಯನ್ನು ಚಾಲುಕ್ಯರ ಶೈಲಿಯಲ್ಲಿ ನೇಮಿನಾಥರ ಮೂರ್ತಿಯನ್ನು ಕಪ್ಪು ಕಲ್ಲಿನಲ್ಲಿ ಕೆತ್ತಲಾಗಿದೆ. ಇಲ್ಲಿನ ಮುಖ್ಯ ಆಕರ್ಷಣೆ “ಮುಖಮಂಟಪ” ವನ್ನು ಎತ್ತರದಲ್ಲಿ ಕಮಲ ಹೂವಿನ ಆಕಾರದಲ್ಲಿ ಕೆತ್ತಲಾಗಿದೆ. ಕಮಲ ಬಸ್ತಿಯ ಹೊರಗಡೆ ಇನ್ನೊಂದು ಜೈನ ದೇವಾಲಯವೂ ಇದೆ.
ತಲುಪುವ ಬಗೆ
ವಿಮಾನದಲ್ಲಿ
ಸಮೀಪದ ವಿಮಾನ ನಿಲ್ದಾಣ ಸಾಂಬ್ರಾ (ಬೆಳಗಾವಿ) ವಿಮಾನ ನಿಲ್ದಾಣ - 8 ಕಿ.ಮೀ
ರೈಲಿನಿಂದ
ಸಮೀಪದ ರೈಲು ನಿಲ್ದಾಣ - ಬೆಳಗಾವಿ - 2 ಕಿ.ಮೀ
ರಸ್ತೆ ಮೂಲಕ
ಬೆಳಗಾವಿ - 1 ಕಿ.ಮೀ