Close

ಯಲ್ಲಮ್ಮಾ ದೇವಸ್ಥಾನ

ಫೋಟೋ ಗ್ಯಾಲರಿ

  • ಯಲ್ಲಮ್ಮಾ ದೇವಸ್ಥಾನ - ಸವದತ್ತಿ
    ಯಲ್ಲಮ್ಮಾ ದೇವಸ್ಥಾನ

ಸವದತ್ತಿ ಇದು ಧಾರ್ಮಿಕ ಕ್ಷೇತ್ರಕ್ಕೆ ಪ್ರಸಿದ್ದವಾಗಿದ್ದು, ಅದರಲ್ಲೂ ಯಲ್ಲಮ್ಮನ ದೇವಸ್ಥಾನಕ್ಕೆ ಇದು ತುಂಬಾ ಪ್ರಸಿದ್ಧಿಯಾಗಿದೆ. ಇದು ಬೆಳಗಾವಿಯಿಂದ 70 ಕೀ.ಮೀ. ದೂರದಲ್ಲಿದೆ. ಸವದತ್ತಿ ನಗರದಿಂದ ಈ ದೇವಸ್ಥಾನ 5 ಕೀ.ಮೀ. ಅಂತರದಲ್ಲಿದೆ. ಈ ದೇವಸ್ಥಾನಕ್ಕೆ ಹತ್ತಿರವಾಗಿ ದೊಡ್ಡದಾದ ಪರ್ವತವನ್ನು ಕಾಣಬಹುದಾಗಿದೆ. ಈ ಹಿಂದೆ ಈ ಪರ್ವತ ಸಿದ್ದಾಂಚಲ ಪರ್ವತ ಎಂದು ಪ್ರಸಿದ್ಧಿ ಹೊಂದಿತ್ತು. ಈ ದೇವಸ್ಥಾನವನ್ನು ಚಾಲುಕ್ಯರು ಹಾಗೂ ರಾಷ್ಟಕೂಟರ ಪದ್ದತಿಯಲ್ಲಿ ಕಟ್ಟಲಾಗಿದೆ. ಈ ದೇವಸ್ಥಾನವನ್ನು ಬೋಪಣ್ಣ ನಾಯಕ ಇವರಿಂದ 1514 ರಲ್ಲಿ ಕಟ್ಟಲ್ಪಟ್ಟಿದೆ. ಇಲ್ಲಿ ಗಣೇಶ, ಮಲ್ಲಿಕಾರ್ಜುನ, ಪರಶುರಾಮ , ಏಕನಾಥ, ಸಿದ್ದೇಶ್ವರ ಇತರೆ ದೇವಸ್ಥಾನಗಳನ್ನು ಇಲ್ಲಿ ಕಾಣಬಹುದಾಗಿದೆ. ದೇವಿಯ ಜಾತ್ರೆಯ ಸಮಯದಲ್ಲಿ ಕರ್ನಾಟಕ ಹೊರತಾಗಿ ಮಹಾರಾಷ್ಟ್ರ , ಗೋವಾ, ಆಂಧ್ರಪ್ರದೇಶದಿಂದ ಬರುವ ಭಕ್ತರನ್ನು ಇಲ್ಲಿ ಕಾಣಬಹುದಾಗಿದೆ. 1975 ರಿಂದ ಇದು ಕರ್ನಾಟಕ ಸರ್ಕಾರದ ಸ್ವಾಧೀನದಲ್ಲಿ ಒಳಪಡುತ್ತಿದ್ದು, ಸರ್ಕಾರವು ಇಲ್ಲಿ ಭಕ್ತಾದಿಗಳ ಸಂಬಂಧ ಧರ್ಮಶಾಲೆ, ಆರೋಗ್ಯ ಕೇಂದ್ರ ಹಾಗೂ ಇನ್ನಿತರೆ ಸೌಕರ್ಯಗಳನ್ನು ಇಲ್ಲಿ ಒದಗಿಸಿದೆ. .

ತಲುಪುವ ಬಗೆ :

ವಿಮಾನದಲ್ಲಿ

ಸಮೀಪದ ವಿಮಾನ ನಿಲ್ದಾಣ ಸಾಂಬ್ರಾ(ಬೆಳಗಾವಿ) ವಿಮಾನ ನಿಲ್ದಾಣ - 70 ಕಿ.ಮೀ

ರೈಲಿನಿಂದ

ಸಮೀಪದ ರೈಲು ನಿಲ್ದಾಣ ಧಾರವಾಡ 40 ಕಿ.ಮೀ

ರಸ್ತೆ ಮೂಲಕ

ಧಾರವಾಡದಿಂದ - 40 ಕಿ.ಮೀ., ಬೆಳಗಾವಿಯಿಂದ 70 ಕಿ.ಮೀ.