ಕೈಗಾರಿಕೆಗಳು:
ಬೆಳಗಾವಿಯು ಔದ್ಯೋಗಿಕ ಪ್ರಗತಿಯಲ್ಲಿ ಭಾರತದಲ್ಲಿಯೇ ಮುಂಚೂಣಿಯಲ್ಲಿದ್ದು, ಕೈಗಾರಿಕೆ ಒಲವು ಹೊಂದಿದೆ. ಬೆಳಗಾವಿ ಔದ್ಯೋಗಿಕ ವಲಯವು ಬಂಡವಾಳ ಹೂಡಿಕೆಗೆ ಸೂಕ್ತಕರವಾಗಿದ್ದು, ಕೈಗಾರಿಕೆಯಲ್ಲಿ ಅತಿ ವೇಗದ ಬೆಳವಣಿಗೆ ಹೊಂದುತ್ತಿರುವ ಕರ್ನಾಟಕ ರಾಜ್ಯದ ವಾಯುವ್ಯ ದಿಕ್ಕಿನಲ್ಲಿರುವ ನಗರವಾಗಿದೆ. ಬೆಳಗಾವಿಯಲ್ಲಿ ಬೃಹತ್ ಕೈಗಾರಿಕೆಗಳು ನಿರ್ಮಾಣವಾಗಿದ್ದು, ಇವುಗಳಲ್ಲಿ ಇಂಡಾಲ ಅಲ್ಯೂಮಿನಿಯಂ ಕಂಪನಿ. ಹಾಗೂ ಪಾಲಿ ಹೈಡ್ರಾನ ಕೈಗಾರಿಕೆಗಳು ಪ್ರಮುಖವಾದವು. ಬೆಳಗಾವಿ ನಗರವು ಆಹಾರ ಉತ್ಪನ್ನಗಳಾದ ಸಕ್ಕರೆ, ಹತ್ತಿ, ತಂಬಾಕು, ಎಣ್ಣೆ ಬೀಜಗಳು ಹಾಗೂ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಪ್ರಸಿದ್ದಿಯಾಗಿದೆ. ಅಲ್ಲದೇ ಚರ್ಮೊಧ್ಯಮ , ಕುಂಬಾರಿಕೆ, ಸೋಪು, ಹತ್ತಿ, ಹಾಗೂ ಬೆಲೆಬಾಳುವ ಲೋಹದ ಉತ್ಪಾದನೆಯ ಕೈಗಾರಿಕೆಗಳು ಇಲ್ಲಿ ನೆಲೆಗೊಂಡಿವೆ. ಬೆಳಗಾವಿ ನಗರವು ವಿದ್ಯುತ್ ಮಗ್ಗ ಕೈಗಾರಿಕೆಯಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದು, ಹಲವಾರು ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ. ಹೈಡ್ರಾಲಿಕ ಯಂತ್ರ ತಯಾರಿಕಾ ಘಟಕವು ಬೆಳಗಾವಿ ನಗರದ ವಿಶೇಷ ಕೈಗಾರಿಕೆಯಾಗಿದೆ. ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಹಾಗೂ ಎಲ್ಲ ಸ್ತರದ ಜನತೆಗೆ ಮಹತ್ವದ ಕೈಗಾರಿಕಾ ಹಾಗೂ ವ್ಯಾಪಾರ ಸ್ಥಳವಾಗಿ ಹೊರಹೊಮ್ಮಿದೆ.
ಬೆಳಗಾವಿ ಹಾಗೂ ಸುತ್ತಮುತ್ತಲಿನ ವಿವಿಧ ಕೈಗಾರಿಕೆಗಳು:
- ಪಾಲಿಹೈಡ್ರೋನ್ ಪ್ರೈವೇಟ್ ಲಿಮಿಟೆಡ್ (ಬೆಳಗಾವಿ)
- ದೂಧಗಂಗಾ ಸಕ್ಕರೆ ಕಾರ್ಖಾನೆ (ಚಿಕ್ಕೋಡಿ)
- ಇಂಡಾಲ್ ಅಲ್ಯುಮಿನಿಯಲ್ ಕಂಪನಿ ಲಿಮಿಟೆಡ್ – ಇಂಡಾಲ (ಬೆಳಗಾವಿ)
- ಹೀರಾ ಶುಗರ್ ಫ್ಯಾಕ್ಟರಿ, ಸಂಕೇಶ್ವರ (ಹುಕ್ಕೇರಿ)
- ಶ್ರೀ ಭಾಗ್ಯಲಕ್ಷ್ಮಿ ಶುಗರ್ ಫ್ಯಾಕ್ಟರ್ (ಖಾನಾಪುರ)
- ಇತರೆ
<
ಪಾಲಿಹೈಡ್ರೋನ್ ಪ್ರೈವೇಟ್ ಲಿಮಿಟೆಡ್ (ಬೆಳಗಾವಿ)

ಇದು ಒಂದು ಪಾಲಿಹೈಡ್ರೋನ್ ಗ್ರೂಪ್ ಅವರ ಫ್ಲ್ಯಾಗ್ ಶಿಪ್ ಕಂಪನಿ ಆಗಿರುತ್ತದೆ. ಬೆಳಗಾವಿ ಜಿಲ್ಲೆಯಲ್ಲಿನ ಉದ್ಯಮಗಳ ಪೈಕಿ ಇದು ಒಂದು ಅತ್ಯುತ್ತಮ ಉದ್ಯಮ ಆಗಿರುತ್ತದೆ. ಈ ಉದ್ಯಮವು ಸೈದ್ಧಾಂತಿಕ ನಿರ್ವಹಣೆಗಾಗಿ ಗುರುತಿಸಲ್ಪಟ್ಟಿದೆ. ಈ ಉದ್ಯಮದೊಂದಿಗೆ ಸಂಪರ್ಕ ಬೆಳೆಸಲು ಮತ್ತು ಅಲ್ಲಿನ ವ್ಯವಸ್ಥೆಯನ್ನು ತಿಳಿದುಕೊಳ್ಳುವ ಸಲುವಾಗಿ ದೇಶಾದ್ಯಂತ ಜನ ಈ ಉದ್ಯಮಕ್ಕೆ ಭೇಟಿ ನೀಡುತ್ತಾರೆ. ಈ ಕಾರಣದೊಂದಿಗೆ ಇದು ಭಾರತದ ಉದ್ಯಮವಲಯದಲ್ಲಿನ ಒಂದು ಪ್ರವಾಸೋದ್ಯಮ ಕೇಂದ್ರವಾಗಿ ಮಾರ್ಪಟ್ಟಿದೆ. 1974 ರಲ್ಲಿ ಶ್ರೀ ಎಸ್. ಬಿ. ಹುಂದ್ರೆ, ಶ್ರೀ ವಿ. ಕೆ. ಸಾಮಂತ ಮತ್ತು ಶ್ರೀ ಡಿ.ಎಸ್.ಚಿಟ್ನಿಸ್ ಎಂಬ ಯುವ ಉದಯೋನ್ಮುಖ ಉದ್ಯಮಿಗಳು ಈ ಕಂಪನಿಯನ್ನು ಹೈಲೊಕ್ ಪಾಲಿಡ್ರಾನ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನೊಂದಿಗೆ ಈ ಕಂಪನಿಯನ್ನು ಪ್ರಾರಂಭಿಸಿದರು. ಕ್ರಮವಾಗಿ 1982 ಮತ್ತು 1986 ರಲ್ಲಿ ಪಾಲಿಹೈಡ್ರೋನ್ ಪ್ರೈವೇಟ್ ಲಿಮಿಟೆಡ್ ಮತ್ತು ಪಾಲಿಹೈಡ್ರೋನ್ ಸಿಸ್ಟಂ ಪ್ರೈವೇಟ್ ಲಿಮಿಟೆಡ್ ಎಂದು ಕ್ರಮವಾಗಿ ಪ್ರಾರಂಭಿಸಿದರು. ಪ್ರಸ್ತುತ ಈ ಕಂಪನಿಯು ಆಯಿಲ್ ಗೇರ್ ಟಾವಲರ್ ಪಾಲಿಹೈಡ್ರೋನ್ ಪ್ರೈವೇಟ್ ಲಿಮಿಟೆಡ್ ಎಂದು ಗುರುತಿಸಲ್ಪಟ್ಟಿದೆ. ಈ ಕಂಪನಿಯು ಶೇಕಡ 32.05% ಸಂಯುಕ್ತ ಅಭಿವೃದ್ಧಿ ನಿರ್ವಹಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ಕಂಪನಿಯು 9 ಕೋಟಿ ವ್ಯವಹಾರ ಮಾಡಿದ್ದು, 72 ಜನ ಉದ್ಯೋಗಿಗಳನ್ನು ಹೊಂದಿರುತ್ತದೆ. ಈ ಕಂಪನಿಯು ಹೈಡ್ರೋಲಿಕ್ ರೇಡಿಯಲ್ ಪಂಪ್ಸ್, ವಾಲ್ವ್ಸ್ ಮತ್ತು ಇತರೆ ಉಪಕರಣಗಳನ್ನು ತಯಾರಿಸುತ್ತದೆ. ಕಳೆದ 15 ವರ್ಷಗಳಿಂದ ಈ ಕಂಪನಿಯು ಭಾರತದಾದ್ಯಂತ ಕಡಿಮೆ ಬೆಲೆಯ ಉತ್ತಮ ಗುಣಮಟ್ಟದ ಸಾಮಗ್ರಿಗಳ ಪರಿಣಾಮಕಾರಿಯಾದ ಸಂಗ್ರಹವನ್ನು ಹೊಂದಿರುತ್ತದೆ. ನಿಗದಿತ ಅವಧಿಯಲ್ಲಿ ಉತ್ಪನ್ನಗಳನ್ನು ತಯಾರಿಸಿ ಸೂಕ್ಷ್ಮ ರೀತಿಯ ಅನುಷ್ಟಾನ ಹಾಗೂ ಸಮರ್ಥವಾದ ನೀತಿ ನಿರೂಪಣೆಯನ್ನು ನಿರ್ವಹಿಸಿಕೊಂಡು ಬರಲಾಗಿದೆ. ಕಳೆದ 15 ವರ್ಷಗಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಬೆಲೆಗಳಲ್ಲಿ ಏರಿಕೆಯನ್ನು ಮಾಡಿದ್ದು, ಈ ಕಂಪನಿಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸ್ಪರ್ದಾತ್ಮಕ ದರದಲ್ಲಿ ಲಭ್ಯವಾಗುತ್ತಿವೆ. ಅಲ್ಲದೆ ಈ ಉದ್ಯಮವು ಪಂಪ್ಸ್, ಪ್ರೆಸರ್ ಕಂಟ್ರೋಲ್ ವಾಲ್ವ್ಸ್ , ಫ್ಲೋ ಕಂಟ್ರೋಲ್ ವಾಲ್ವ್ಸ್ , ಮೊಬೈಲ್ ವಾಲ್ವ್ಸ್ ಹಾಗೂ ತತ್ಸಂಬಧಿತ ಇನ್ನಿತರೆ ಉಪಕರಣಗಳನ್ನು ತಯಾರಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಪಾಲಿಹೈಡ್ರೋನ್ ಪ್ರೈವೇಟ್ ಲಿಮಿಟೆಡ್
ಮಚ್ಛೆ ಇಂಡಸ್ಟ್ರಿಯಲ್ ಎಸ್ಟೇಟ್, ಮಚ್ಛೆ,
ಬೆಳಗಾವಿ – 590014
ದೂ. ಸಂ: 0831-2411001.
ಫ್ಯಾಕ್ಸ:: + 91-(0)831-2411 002
ವಿ.ಅಂಚೆ: polyhydron[at]vsnl[dot]com
ವೆಬ್ಸೈಟ್: www[dot]polyhydron[dot]com
ದೂಧ್ ಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ (ಚಿಕ್ಕೋಡಿ)

ಈ ಉದ್ಯಮ 1969 ರಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಸ್ಥಾಪನೆಯಾಗಿದೆ. ಈ ಉದ್ಯಮದ ಮುಖ್ಯ ಉದ್ದೇಶವೆಂದರೆ ಕಬ್ಬು ಬೆಳೆಗಾರರ ಸ್ಥಿತಿಗತಿಯನ್ನು ಉನ್ನತ ಪಡಿಸುವುದು ಹಾಗೂ ಸಕ್ಕರೆ ಉತ್ಪಾದನೆಯೊಂದಿಗೆ, ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಪಡಿಸುವುದು ಇದರ ಮುಖ್ಯ ಧ್ಯೇಯವಾಗಿದೆ. ಮೊಟ್ಟಮೊದನೆಯದಾಗಿ ಈ ಉದ್ಯಮವು ನಂದಿ ಗ್ರಾಮದಿಂದ ಉತ್ಪಾದನೆ ಪ್ರಾರಂಭಿಸಲಾಯಿತು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಶ್ರೀ ದೂಧಗಂಗಾ ಕೃಷ್ಣಾ ಎಸ್.ಎಸ್.ಕೆ. ನಿಯಮಿತ
ಚಿಕ್ಕೋಡಿ-591 247
ಬೆಳಗಾವಿ ಜಿಲ್ಲೆ
ದೂ.ಸಂ – 08338-276931 -35
ಫ್ಯಾಕ್ಸ್ – 08338 -276932
ಇಂಡಾಲ್ ಅಲ್ಯುಮಿಮಿಯಮ್ ಕಂಪನಿ ಲಿಮಿಟೆಡ್ (ಇಂಡಾಲ್)

ಈ ಕಂಪನಿಯು 1938 ರಲ್ಲಿ ಸ್ಥಾಪನೆಯಾಗಿದ್ದು, ಬೆಳಗಾವಿ ನಗರದಿಂದ ಸುಮಾರು 7 ಕೀ.ಮೀ. ಅಂತರದಲ್ಲಿದೆ. 1944 ರಲ್ಲಿ ಈ ಕಂಪನಿಯ ಹೆಸರನ್ನು ಇಂಡಿಯನ್ ಅಲ್ಯುಮಿನಿಯಮ್ ಕಂಪನಿ ಎಂದು ಬದಲಿಸಲಾಯಿತು ಹಾಗೂ 1945 ರಲ್ಲಿ ಇದು ಪಬ್ಲಿಕ್ ಲಿಮಿಟೆಡ್ ಅಲ್ಯುಮಿನಿಯಮ್ ಕಂಪನಿ, ನಿಯಮಿತ (ಇಂಡಾಲ್) ಎಂದು ಪರಿವರ್ತನೆಗೊಂಡಿತು. ಈ ಕಂಪನಿಯು ಸುಮಾರು 6 ದಶಕಗಳಿಂದ ಆದಿತ್ಯ ಬಿರ್ಲಾ ಗ್ರೂಪ್ ಕಂಪನಿಯ ಒಂದು ಭಾಗವಾಗಿದ್ದು, ಇದರೊಂದಿಗೆ ಸೇರಿ ಈ ಕಂಪನಿಯು ಸುಮಾರು 96% ಇಕ್ವಿಟಿ ಶೇರುಗಳನ್ನು ಹೊಂದಿದ ಅಲ್ಲದೆ ದೇಶದಲ್ಲಿನ ಅತೀ ದೊಡ್ಡ ಉದ್ಯಮದಲ್ಲಿ ಇದು ಕೂಡ ಒಂದಾಗಿದೆ. ಅಲ್ಯುಮಿನಿಯಂ ಉತ್ಪನ್ನಗಳನ್ನು ಉತ್ಪಾದಿಸುವಲ್ಲಿ ಇಂಡಾಲ್ ಮುಂಚೂಣಿಯಲ್ಲಿದೆ. ಈ ಕಂಪನಿಯು ಅಲ್ಯುಮಿನಿಯ ಹಾಗೂ ಹೈಡ್ರೇಟ್ಸ್ ಆಫ್ ಅಲ್ಯುಮಿನಿಯಂ ಮತ್ತು ಪ್ರೈಮರಿ ಅಲ್ಯುಮಿನಿಯಂ ಮೆಟಲ್ ಗಳನ್ನು ಉತ್ಪಾದಿಸುತ್ತದೆ. ಇತ್ತೀಚಿಗೆ ಆದಿತ್ಯ ಬಿರ್ಲಾ ಗ್ರೂಪ್ ಕಂಪನಿಯು ಈ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು, ಈ ಕಂಪನಿಯನ್ನು ಹಿಂಡಾಲ್ಕೋ (ಇಂಡಾಲ್) ಎಂದು ಬದಲಿಸಲಾಗಿದೆ. ಈ ಕಂಪನಿಯು ಬಾಕ್ಸೈಟ್ ಮೈನ್ ಹಾಗೂ ಪಾವರ್ ಪ್ಲಾಂಟ್ಗಳಿಗಾಗಿ ಐಎಸ್ಒ 140001 ಪರಿಸರ ನಿರ್ವಹಣಾ ವ್ಯವಸ್ಥೆ ಪ್ರಮಾಣಪತ್ರ (ಸರ್ಟಿಫೀಕೇಟ್) ಪಡೆದಿರುವ ಏಷ್ಯಾದಲ್ಲಿನ ¨ಪ್ರಪ್ರಥಮ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಲವು ಇಂಡಾಲ್ ಕಂಪನಿಗಳ ಶಾಖೆಗಳು ಇಂಧನ ಕ್ಷಮತೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿವೆ.
ಹಿಂಡಾಲ್ಕೊ ಮತ್ತು ಇಂಡಾಲ್ ಈ ಎರಡೂ ಕಂಪನಿ ಸೇರಿ ಆದಿತ್ಯ ಬಿರ್ಲಾ ಗ್ರೂಪ್ನ ಕಾಪ್ರ್ ವಿಭಾಗದ ಒಂದು ಭಾಗವಾಗಿ ಸೇರ್ಪಡೆ ಹೊಂದಿದ್ದು, ವಿಶ್ವಮಟ್ಟದಲ್ಲಿ ಹಾಗೂ ಈ ಉದ್ದಿಮೆಯು ದೇಶಾದ್ಯಂತ ತನ್ನ ವಿಭಾಗಗಳನ್ನು, ಗಣಿಗಾರಿಕೆಯನ್ನು ಹಾಗೂ ಕಚೇರಿಗಳನ್ನು ಹೊಂದಿರುವುದರಿಂದ ದೇಶ ಹಾಗೂ ಹೊರದೇಶದಲ್ಲಿ ಮಾರುಕಟ್ಟೆಯನ್ನು ಹೊಂದಲು ಸಾಧ್ಯವಾಗಿದೆ. ಇಂಡಾಲ್ ಕಂಪನಿಯು ಎಲ್ಲ ರೀತಿಯ ಅಲುಮಿನಿಯಮ್ ಉತ್ಪನ್ನಗಳ ಸಂಯುಕ್ತ ಉದ್ಯಮವಾಗಿ ಮಾರ್ಪಟ್ಟಿದೆ. ISO 9001 & 140001 ಇವರಿಂದ ಗುಣಮಟ್ಟ ಹಾಗೂ ಪರಿಸರ ನಿರ್ವಹಣೆಗೆ ಪ್ರಮಾಣೀಕರಿಸಲ್ಪಟ್ಟಿದೆ. ಅಲ್ಲದೇ ರಾಸಾಯನಿಕ ಹಾಗೂ ಮೌಲಾಧ್ಯಾರಿತ ಉತ್ಪನ್ನಗಳಾದ ಅಲ್ಯುಮಿನಿಯಮ್ ಹಾಳೆಗಳನ್ನು, ವಿವಿಧ ಉತ್ಪನ್ನಗಳನ್ನು ಫಾಯಿಲ್ ಗಳನ್ನು ಉತ್ಪಾದಿಸುವಲ್ಲಿ ದೇಶದ ಉದ್ದಿಮೆಗಳಲ್ಲಿಯೇ ಉನ್ನತ ಸ್ಥಾನವನ್ನು ಅಂಲಕರಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಬೆಳಗಾವಿ ವರ್ಕ್ಸ
ಯಮನಾಪುರ, ಬೆಳಗಾವಿ – 590010
ದೂ. ಸಂ – 0831-2472716, ಫ್ಯಾಕ್ಸ್ – 0831-2472728
ಬೆಳಗಾವಿ ಆರ್ & ಡಿ. ಸೆಂಟರ್
ಯಮನಾಪುರ, ಬೆಳಗಾವಿ – 590010
ದೂ.ಸಂ-0831-2472738 ಫ್ಯಾಕ್ಸ್ -0831-2472738
ಹೀರಾ ಶುಗರ್ (ಸಂಕೇಶ್ವರ, ಹುಕ್ಕೇರಿ)

ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ, ನಿಯಮಿತ, ಸಂಕೇಶ್ವರ ಇದು ಹುಕ್ಕೇರಿ ತಾಲ್ಲೂಕಿನಲ್ಲಿ 1956 ರಲ್ಲಿ ನೋಂದಣಿಯಾಗಿ, 1961 ರಲ್ಲಿ ಉತ್ಪಾದನೆ ಪ್ರಾರಂಭಿಸಿತು. ಈ ಉದ್ದಿಮೆಯು ಸುಮಾರು 1500 ಜನರಿಗೆ ಉದ್ಯೋಗಾವಕಾಶವನ್ನು ನೀಡಿದೆ. ಹರಳು ಸಕ್ಕರೆ ಈ ಕಂಪನಿಯ ಮುಖ್ಯ ಉತ್ಪನ್ನಗಳಲ್ಲಿ ಒಂದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ
ಸಂಕೇಶ್ವರ -591 314
ಬೆಳಗಾವಿ ಜಿಲ್ಲೆ
ದೂ.ಸಂ-08333-2733338/273334
ಫ್ಯಾಕ್ಸ್ – 08333 – 273001 ದೂ.ಸಂ – 98440 50300
ಶ್ರೀ ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ (ಖಾನಾಪುರ)

ಈ ಉದ್ದಿಮೆಯು ಖಾನಾಪುರ ತಾಲ್ಲೂಕಿನ ಕುಪ್ಪಟಗಿರಿಯಲ್ಲಿದ್ದು, ಸಕ್ಕರೆ ಉತ್ಪಾದನೆ ಈ ಕಂಪನಿಯ ಪ್ರಮುಖ ಉತ್ಪಾದನೆಯಾಗಿದೆ. ದಿ:10-12-1982 ರಲ್ಲಿ ಈ ಕಂಪನಿಯು ನೋಂದಾಯಿಸಲ್ಪಟ್ಟಿದ್ದು, ಕೈಗಾರಿಕೆಯನ್ನು ನಡೆಸಲು 17-03-1998 ರಲ್ಲಿ ಇದಕ್ಕೆ ಅನುಮತಿ ದೊರಕಿತು. ಪ್ರತಿದಿನ 2500 ಎಂ.ಟಿ. ಯಷ್ಟು ಸಕ್ಕರೆ ಉತ್ಪಾದನೆಯಾಗುತ್ತದೆ. 2001 ರ ಪ್ರಕಾರ ಒಟ್ಟು 3,25,407 ಎಂ.ಟಿ. ಯಷ್ಟು (ಬಿಳಿ ಸಕ್ಕರೆ) 690 ಎಂ.ಟಿ (ಕೆಂಪು) ನಷ್ಟು ಉತ್ಪಾದನೆ ಹೊಂದಿದೆ. ಪ್ರತಿ ವರ್ಷ 4.5 ಲಕ್ಷ ಎಂ.ಟಿ ಅಥವಾ ಅದಕ್ಕೂ ಹೆಚ್ಚಿನ ಉತ್ಪಾದನೆ ಮಾಡುವುದು ಈ ಕಂಪನಿಯ ಗುರಿಯಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ಭಾಗ್ಯಲಕ್ಷ್ಮಿ ಎಸ್.ಎಸ್.ಕೆ. ಲಿಮಿಟೆಡ್
ಖಾನಾಪುರ
ಬೆಳಗಾವಿ ಜಿಲ್ಲೆ
ದೂ.ಸಂ – 08336-222436 /222482/222982
ಇತರೆ ಕೈಗಾರಿಕೆಗಳು
ಗೋಕಾಕ ಮಿಲ್ಸ್ (ಗೋಕಾಕ) – ಇದು 1885 ರಲ್ಲಿ ಸ್ಥಾಪನೆಯಾಗಿದ್ದು, ಗೋಕಾಕ ನಿಂದ 6 ಕೀ.ಮೀ. ಅಂತರದಲ್ಲಿದೆ. ಇಲ್ಲಿ ಕಚ್ಚಾ ಹತ್ತಿಯನ್ನು ನೂಲು ಅಥವಾ ದಾರ ರೂಪದಲ್ಲಿ ಪರಿವರ್ತಿಸಲಾಗುತ್ತಿದೆ. ಇಲ್ಲಿ ಹತ್ತಿಯಿಂದ ನೂಲು ಎಲೆ ದಾರ, ಹಗ್ಗ, ಕ್ಯಾನವಾಸ್, ಇನ್ನಿತರೆ ವಸ್ತುಗಳನ್ನು ಉತ್ಪಾದಿಸಲಾಗುತ್ತದೆ.
ಉಗಾರ ಶುಗರ್ ವರ್ಕ್ಸ : ಈ ಉದ್ಯಮವು 1939 ರಲ್ಲಿ ಅಥಣಿ ತಾಲ್ಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ಸ್ಥಾಪನೆಗೊಂಡಿದೆ. ಈ ಕಂಪನಿಯಲ್ಲಿ ಸಕ್ಕರೆ ಹಾಗೂ ಅಲ್ಕೋಹಾಲ್ ಉತ್ಪಾದಿಸುತ್ತಿದ್ದು, ಇವು ಈ ಕಂಪನಿಯ ಪ್ರಮುಖ ಉತ್ಪಾದನೆಯಾಗಿದೆ.
ಬೆಮ್ಕೋ ಹೈಡ್ರಾಲಿಕ್ಸ್ (ಬೆಳಗಾವಿ) – ಹೆಡ್ರಾಲಿಕ್ಸ್ ಪ್ರೈವೇಟ್ ಲಿ. – 1957 ಬೆಳಗಾವಿಯಲ್ಲಿ ಇದು ಸ್ಥಾಪನೆಗೊಂಡು , ಬೆಮ್ಕೋ ಹೈಡ್ರೋಲಿಕ್ಸ್ ಕಂಪನಿ ಅಂತಾ ಸಂಘಟಿತಗೊಂಡು ಹೈಡ್ರೋಲಿಕ್ಸ್ ಪ್ರೆಸ್ ಸ್ ಮತ್ತು ಸಾಧನ-ಸಲಕರಣೆಗಳ ಉತ್ಪಾದನೆ ಹಾಗೂ ಮಾರಾಟ ಮಾಡುತ್ತದೆ. ಈ ಪಾಲುದಾರಿಕೆಯು 1976 ರಲ್ಲಿ ಸಾರ್ವಜನಿಕ ನಿಯಮಿತ ಕಂಪನಿಯಾಗಿ ಪರಿವರ್ತಿತಗೊಂಡಿದೆ. ( Public Ltd. Co.)
ಅರುಣ ಇಂಜಿನಿಯರಿಂಗ್ ವರ್ಕ್ಸ (ಬೆಳಗಾವಿ) – ಈ ಉದ್ಯಮವು ಪಾಲುದಾರಿಕೆ ಸಂಸ್ಥೆಯಾಗಿದ್ದು, 1960 ರಲ್ಲಿ ಉದ್ಯಮಬಾಗ, ಬೆಳಗಾವಿ ಇಲ್ಲಿ ಸ್ಥಾಪನೆಗೊಂಡಿದೆ. ಇಲ್ಲಿ ಕ್ರ್ಯಾಂಕ್ ಷಾಫ್ಟ, ರೋಟಾರ್ಸ್ ಇತ್ಯಾದಿ ವಸ್ತುಗಳ ಸಂಸ್ಕರಣೆ ಹಾಗೂ ಉತ್ಪಾದನೆ ಮಾಡಲಾಗುತ್ತದೆ. ಅಲ್ಲದೇ ಹೈಡ್ರೋಲಿಕ್ಸ್ ಜಾಕ್ಸ್ ಮತ್ತು ಹೈಡ್ರೋಲಿಕ್ಸ್ ಪ್ರೆಸ್ಸ್ ನಂತಹ ಉತ್ಪನ್ನಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.
ಮಲಪ್ರಭಾ ಕೋ-ಆಪ್ ರೇಟಿವ್ ಶುಗರ್ ಫ್ಯಾಕ್ಟರಿ (ಹುಬ್ಬಳ್ಳಿ-ಬೆಳಗಾವಿ) – ಮುಗಟ್ ಖಾನ್, ಹುಬ್ಬಳ್ಳಿಯಲ್ಲಿ ಇರುವ ಇದು ಒಂದು ಸಕ್ಕರೆ (ಕಾರ್ಖಾನೆ) ಉದ್ಯಮವಾಗಿದ್ದು, ಇದು 1961 ರಲ್ಲಿ ಸ್ಥಾಪನೆಗೊಂಡಿದೆ. ಇಲ್ಲಿ ಸಕ್ಕರೆ ಉತ್ಪಾದನೆ ಹಾಗೂ ಸಕ್ಕರೆ ಸಂಬಧಿತ ಇತರೆ ಮೈತ್ರಿ ಉತ್ಪನ್ನಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಅಲ್ಲದೆ ಇದು ಸುಮಾರು 1200 ಜನರಿಗೆ ಇಲ್ಲಿ ಉದ್ಯೋಗವನ್ನು ಒದಗಿಸಿದೆ. ಈ ಉದ್ಯಮದ ಉತ್ಪನ್ನ ಸಾಮರ್ಥ್ಯ 3500 ಎಂ.ಟಿ. ನಷ್ಟು ಇರುತ್ತದೆ.
ನ್ಯಾಷನಲ್ ಇನ್ಸ್ಟಿಟ್ಯಾಟ್ ಆಪ್ ಹೈಡ್ರೋಲಾಜಿ (ಬೆಳಗಾವಿ ) – ಈ ಸಂಸ್ಥೆಯು 1978 ರಲ್ಲಿ ಬೆಳಗಾವಿಯಲ್ಲಿ ಸ್ಥಾಪನೆಯಾಗಿದ್ದು, ಇದರ ಕೇಂದ್ರ ಕಚೇರಿ ಉತ್ತರಾಂಚಲದ ರೂರ್ಕಿಯಲ್ಲಿದೆ. ಈ ಸಂಸ್ಥೆಯ ಮುಖ್ಯ ಉದ್ದೇಶವೆಂದರೆ ಹೈಡ್ರೋಲಾಜಿಯಲ್ಲಿ (ಜಲಶಾಸ್ತ್ರದಲ್ಲಿನ) ಎಲ್ಲಾ ಅಂಶಗಳನ್ನು ವ್ಯವಸ್ಥಿತ ಹಾಗೂ ವೈಜ್ಞಾನಿಕ ಸಂಶೋಧನೆ ಮಾಡುವುದಾಗಿದೆ. ದೇಶ-ವಿದೇಶದಲ್ಲಿನ ಹೈಡ್ರೋಲಾಜಿಯಲ್ಲಿನ ನಿರ್ದಿಷ್ಟ ಜಲ ಸಮಸ್ಯೆಗಳನ್ನು, ತೊಂದರೆಗಳನ್ನು ತಿಳಿದುಕೊಳ್ಳುವ ಸಂಬಂಧವಾಗಿ ಮೊಟ್ಟಮೊದಲ ಅಧ್ಯಯನ ಕೇಂದ್ರ ಬೆಳಗಾವಿಯಲ್ಲಿ ಸ್ಥಾಪನೆಗೊಂಡಿತು. ಇತರೆ ಕೇಂದ್ರಗಳು ಗೌಹಾಟಿ, ಕಾಕಿನಾಡ, ಪಾಟ್ನಾ ಇಲ್ಲಿ ಸ್ಥಾಪಿತಗೊಂಡಿವೆ.
ಪ್ರಸ್ತುತ ಹಾರ್ಡ್ ರಾಕ್ ರಿಜಿನಲ್ ಸೆಂಟರ್ ಇಲ್ಲಿ 7 ಜನ ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದು, ಮಣ್ಣು ತಪಾಸಣೆ ಹಾಗೂ ನೀರಿನ ಗುಣಮಟ್ಟದ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ. ಅಲ್ಲದೆ ಇಲ್ಲಿ ಹವಾಮಾನ ನಿಯಂತ್ರಿಕ ಕೇಂದ್ರಗಳ ಮೇಲ್ವಿಚಾರಣಾ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪಿ.ಟಿ.ಪಿ. ಸಿ ಎನ್.ಸಿ. : ಈ ಉದ್ಯಮವು ಎಲ್ಲ ರೀತಿಯ ರಿಟೆನ್ಶೆನ್ ನಾಬ್ (ಪುಲ್ ಸ್ಟಡ್ಸ್) ತಯಾರಿಸುವ ಉದ್ಯಮವಾಗಿರುತ್ತದೆ. ಈ ಉದ್ಯಮವು ಸಾಮಾನ್ಯವಾಗಿ ಹೆಚ್ಚನ ಪ್ರಮಾಣದ ಸಂಗ್ರಹವನ್ನು ಹೊಂದಿದ್ದು, ಭಾರತದಾದ್ಯಂತ ಉದ್ದಿಮೆಗಳ ಸಂಪರ್ಕ ಜಾಲವನ್ನು ಹೊಂಇದ್ದು, ಉದ್ಯಮ ಪಾಲುದಾರರನ್ನು ಹೊಂದಿರುತ್ತದೆ. ಸಂಸ್ಥೆಯು ನವೀನ ಮಾದರಿಯ ತಂತ್ರಜ್ಞಾನದ ಅಭಿವೃದ್ದಿ ಮತ್ತು ಸೃಜನೆ ವಿಭಾಗವನ್ನು ಹೊಂದಿದ್ದು, ಈ ವಿಭಾಗವನ್ನು ತಾಂತ್ರಕ ಕೌಶಲ್ಯ ಹೊಂದಿದ ಕಾರ್ಯಕಾರಿ ನಿರ್ದೇಶಕರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಸಂಸ್ಥೆಯು ಶ್ರೇಷ್ಟ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಗುರಿಯನ್ನು ಪರಿಣಾಮಕಾರಿಯಾದ ನೀತಿ ಅನುಷ್ಟಾನದ ಮೂಲಕ ಸಾಧಿಸುತ್ತಿದೆ.
ಸಂಸ್ಥೆಯ ಪ್ರಮುಖ ಉತ್ಪಾದನೆಗಳಲ್ಲಿ ಟೂಲ್ ಹೋಲ್ಡರ್, ಸೈಡ್ ಲಾಕ್, ಅಡಾಪ್ಟರ್ ಫಾರ್ ಮಿಲ್ಲಿಂಗ್ ಕಟರ್ಸ್, ಮತ್ತು ವೈಬ್ರೇಶನ್ ಸಿಸ್ಟಮ್ ಇತ್ಯಾದಿ ಹಲವಾರು ಉತ್ಪನ್ನಗಳು ಒಳಗೊಂಡಿವೆ.